ಬಿಎಲ್‌ಡಿಇಯಿಂದ ಜನಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ

BLDE BEEDI NATAKA
ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಎದುರು ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಅಂಗರಚನಾ ಶಾಸ್ತ್ರದ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು. ಆರ್.ಎಸ್. ಬುಲಗೌಡ, ನರೇಶ ಪೊದ್ದಾರ ಮತ್ತು ಗೋರಖ ಭಾವಸಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಶ್ವ ಅಂಗರಚನಾ ಶಾಸ್ತ್ರ ದಿನದಂಗವಾಗಿ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಅಂಗರಚನಾ ಶಾಸ್ತ್ರ ವಿಭಾಗದಿಂದ ಬುಧವಾರ ನಗರದ ಐದು ಕಡೆಗಳಲ್ಲಿ ಬೀದಿ ನಾಟಕದ ಪ್ರದರ್ಶನ ನಡೆಯಿತು.

ನಗರದ ಬಿಎಲ್ಡಿಇ ಆಸ್ಪತ್ರೆ ಎದುರಿಗೆ, ಶ್ರೀ ಸಿದ್ದೇಶ್ವರ ದೇವಸ್ಥಾನ, ಗಾಂಧಿಚೌಕ್, ರೈಲು ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂಬಿಬಿಎಸ್ ಪ್ರಥಮ ವರ್ಷದ 75 ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.

ದೇಹದಾನದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನರೇಶ ಪೊದ್ದಾರ ಮತ್ತು ಗೋರಖ ಭಾವಸಾರ ರಚಿಸಿ ನಿರ್ದೇಶಿಸಿರುವ ಈ ಬೀದಿ ನಾಟಕ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪ್ರದರ್ಶನ ಮಾಡಲಾಯಿತು.

ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್.ಎಸ್. ಬುಲಗೌಡ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ವಿ.ಪಾಟೀಲ, ಪ್ರಾಧ್ಯಾಪಕ ಡಾ. ಎಸ್.ವಿ. ಯಾತಗಿರಿ, ಡಾ. ಅಶ್ವಿನಿ ನುಚ್ಚಿ, ಡಾ. ವೀಣಾ ಹರವಾಳಕರ, ಡಾ.ಐ.ಬಿ. ಬಾಗೋಜಿ, ಡಾ. ಎಂ.ಕೆ. ಖುರೇಶಿ, ಡಾ. ನಂದೇಶ ಕಡಕೊಳ, ಪ್ರಯೋಗಲಾಯದ ತಂತ್ರಜ್ಞರಾದ ಆರ್.ಪಿ. ಮೆಳ್ಳಿ, ಬಿ.ಎಸ್. ಕಟ್ಟಿಮನಿ, ಅಜೀತ ಉಪಾದ್ಯಾಯ, ಆರ್.ಬಿ. ಪಡಗಾನೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net