

ನಾಲತವಾಡ : ಅಸ್ಪೃಶ್ಯತೆ ಸಾಮಾಜಿಕ ಪಿಡುಗಾಗಿದ್ದು, ಇದು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸಂತಿ ಮಠ ಹೇಳಿದರು.
ಜಿ.ಪಂ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಸಂಸ್ಥೆ (ಐಆರ್ಡಿ) ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ವೃತ್ತದ ಬಳಿ ಅಸ್ಪೃಶ್ಯತೆ ನಿಮೂರ್ಲನೆ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಪ.ಪಂ. ಅಧ್ಯೆ ವಿಜಯಲಕ್ಷ್ಮೀ ಇಳಕಲ್ಲ ಮಾತನಾಡಿ, ಅಸ್ಪೃಶ್ಯತೆಯನ್ನು ಗ್ರಾಮೀಣ ಭಾಗದಲ್ಲಿ ಪತ್ತೆ ಹಚ್ಚುವ ಮೂಲಕ ನಿಮೂರ್ಲನೆ ಮಾಡಬೇಕು ಎಂದರು.
ಪ.ಪಂ. ಉಪಾಧ್ಯ ಬಸವರಾಜ ಗಂಗನಗೌಡರ, ಜಿಲ್ಲಾ ದೌರ್ಜನ್ಯ ಸಮಿತಿಯ ಮಲ್ಲು ತಳವಾರ, ಪ.ಪಂ. ಅಧಿಕಾರಿ ಈರಣ್ಣ ಕೊಣ್ಣೂರ, ಪ.ಪಂ. ಸದಸ್ಯ ಶಿವಪುತ್ರಪ್ಪ ಗುರಿಕಾರ, ಐಆರ್ಡಿ ಇಸಿಒ ಬಾಬು ಸಜ್ಜನ, ಎಸ್.ಎಂ. ಕಲಬುರ್ಗಿ, ಎನ್.ಸಿ. ಗುಡಗುಂಟಿ, ಬಸಯ್ಯ ಹಿರೇಮಠ ಇದ್ದರು. ಎಚ್. ಕೋರಿ ವಂದಿಸಿದರು. ಮಹಾಂತೇಶ ತಾಳಿಕೋಟಿ ನಿರೂಪಿಸಿದರು.