ಬಂಜೆತನ ಮುಕ್ತ ರಾಜ್ಯಕ್ಕಾಗಿ ಬೀದಿ ನಾಟಕ

CTD 08 Deepak
Published on

ಚಿತ್ರದುರ್ಗ: ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಸುವರ್ಣ ದೀಪ ಟ್ರಸ್ಟ್‌ನ ದೀಪಕ್ ಆರ್.ಸಾಗರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಜೆತನ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಮಗು ಆಗದಿರಲು ಸ್ತ್ರೀ ಮಾತ್ರ ಕಾರಣ ಎಂಬ ಧೋರಣೆ ಸರಿಯಲ್ಲ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ 31 ಜಿಲ್ಲೆಗಳಲ್ಲೂ ಬೀದಿ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದರು.

ಆಧುನಿಕ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಬಂಜೆತನ ನಿರ್ಮೂಲನೆ ಮಾಡಬಹುದಾಗಿದೆ. ಟ್ರಸ್ಟ್ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ನಮ್ಮ ಅಭಿಯಾನದ ಪ್ರಯೋಜನ ಮಕ್ಕಳಿಲ್ಲದ ದಂಪತಿಗಳು ಪಡೆಯಬಹುದು ಎಂದು ತಿಳಿಸಿದರು.

ಭಾಗ್ಯಶ್ರೀ, ಮಹಿಮಾ, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net