ಮಾಜಿ ಶಾಸಕರಿಗೆ ಬೀದಿ ನಾಯಿ ಕಡಿತ ಗಂಭೀರವಾಗಿ ಪರಿಗಣಿಸಿ ಶೀಘ್ರ ಸ್ಥಳಾಂತರಕ್ಕೆ ಆಗ್ರಹ

bava
Published on


ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವ ಅವರಿಗೆ ಕದ್ರಿ ಪಾರ್ಕ್ ಬಳಿ ಬೀದಿ ನಾಯಿ ಕಚ್ಚಿದ ಪರಿಣಾಮ ಗಾಯಗೊಂಡು ನಡೆದಾಡಲು ಪ್ರಯಾಸ ಪಡುವಂತಾಗಿದೆ.


ಕದ್ರಿ ಪಾರ್ಕ್‌ಗೆ ವಾಕಿಂಗ್‌ಗೆ ಬಂದಿದ್ದ ವೇಳೆ ಕೆಲವು ದಿನಗಳ ಹಿಂದೆ ಬೀದಿ ನಾಯಿ ಅವರ ಬಲ ಕಾಲಿಗೆ ಕಚ್ಚಿದೆ. ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಅವರು ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲು ಆಗಮಿಸಿದ್ದರು. ನೋವು ಕಡಿಮೆಯಾಗದ ಕಾರಣ ಗಾಲಿ ಕುರ್ಚಿಯಲ್ಲಿ ಓಡಾಡುವಂತಾಗಿದೆ. ಕಾರಿಗೆ ಹತ್ತಿ ಕುಳಿತುಕೊಳ್ಳಲು ಇನ್ನೊಬ್ಬರ ಸಹಾಯ ಪಡೆಯಬೇಕಾಗಿದೆ.


ಬೀದಿ ನಾಯಿ ಸ್ಥಳಾಂತರಕ್ಕೆ ಒತ್ತಾಯ: ನಗರದ ಕದ್ರಿ ಪಾರ್ಕ್ ಸೇರಿದಂತೆ ಹಲವು ಕಡೆ ಅಪಾಯಕಾರಿ ಬೀದಿ ನಾಯಿಗಳಿವೆ. ಇದರಿಂದ ಸಾರ್ವಜನಿಕರು ಭಯದ ವಾತಾವರಣದಲ್ಲಿ ನಡೆದಾಡುವಂತಾಗಿದೆ. ಪಾರ್ಕ್‌ಗೆ ಬರುವ ಮಕ್ಕಳು, ಮಹಿಳೆಯರಿಗೆ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಂಡು ಆದಷ್ಟು ಶೀಘ್ರ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net