

ಮಡಿಕೇರಿ
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಪ್ರಾಣಿ ಪ್ರಿಯರ ವಿರೋಧ ಮತ್ತು ಕಾನೂನಿನ ಕೆಲವೊಂದು ಕಟ್ಟುಪಾಡುಗಳಿಂದಾಗಿ ಬೀದಿ ನಾಯಿಗಳ ನಿಯಂತ್ರಣ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವ ಆರೋಪಗಳಿವೆ. ಅಲ್ಲಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆಗಳನ್ನು ಮಾಡಿದ್ದರೂ ನಾಯಿಗಳ ಸಂಖ್ಯೆಯಲ್ಲಿ ಇಳಿಕೆ ಮಾತ್ರ ಆಗುತ್ತಿಲ್ಲ. ಮನೆಯಲ್ಲಿ ಸಾಕಿದ ನಾಯಿಗಳಿಗೆ ಹೆಣ್ಣು ಮರಿಗಳು ಹುಟ್ಟಿದರೆ ಅವುಗಳನ್ನೂ ಬಹುತೇಕರು ಬೀದಿ ಪಾಲು ಮಾಡುವುದರಿಂದ ಕೂಡ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಆಗಿದೆ.
ಬೀದಿ ನಾಯಿಗಳ ಕಡಿತ, ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವುದು, ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದು ಅಪಘಾತಗಳು ಸಂಭವಿಸಿಸುವುದು ಸಾಮಾನ್ಯ ಎಂಬAತಾಗಿದೆ. ಹಾಗಾಗಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬರುತ್ತಿದೆ.
ಮತ್ತೊಂದು ಕಡೆ ಬೀಡಾಡಿ ದನಗಳ ಹಾವಳಿಯೂ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ 275 ಸೇರಿದಂತೆ ಬಹುತೇಕ ಮಾರ್ಗಗಳಲ್ಲಿ ರಸ್ತೆ ಮಧ್ಯೆಯೇ ಜಾನುವಾರುಗಳು ಸಂಚರಿಸುತ್ತಿರುತ್ತವೆ. ಇದರಿಂದಾಗಿ ಅಪಘಾತಗಳ ಪ್ರಮಾಣವೂ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ರಸ್ತೆಗೆ ಬಿಡುವ ಮಾಲೀಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯವೂ ಇದೆ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ಬೀಡಾಡಿ ದನಗಳ ಹಾವಳಿಯಿಂದ ದೊಡ್ಡಮಟ್ಟದ ಸಮಸ್ಯೆಯಾಗುತ್ತದೆ. ಶಾಲಾ, ಕಾಲೇಜು ಬಿಡುವ ಸಂದರ್ಭದಲ್ಲೇ ಮುಖ್ಯ ರಸ್ತೆಯಲ್ಲಿ ಜಾನುವಾರುಗಳು ಇರುತ್ತವೆ. ಅಟೋ ಸೇರಿದಂತೆ ವಾಹನಗಳನ್ನು ಓಡಿಸುವಾಗ ಭಯವಾಗುತ್ತದೆ. ಗೂಳಿಗಳು ಗುದ್ದಾಟಕ್ಕೆ ನಿಂತರೆ ಅನಾಹುತ ಗ್ಯಾರಂಟಿ. ಬೀಡಾಡಿ ದನಗಳನ್ನು ರಸ್ತೆಗೆ ಬೀಡುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಹರೀಶ್ ಕುಮಾರ್, ಆಟೋ ಚಾಲಕ, ಬಿಳಕಿಕೊಪ್ಪ ಗ್ರಾಮ
ಮಾಲೀಕರು ನಾಯಿಗಳನ್ನು ಕಟ್ಟಿ ಸಾಕಬೇಕು. ಶಾಲಾ, ಕಾಲೇಜು ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳನ್ನು ಕಂಡರೆ ಭಯಪಡುತ್ತಾರೆ. ಮಹಿಳೆಯರು ಸ್ಕೂಟರ್ ಚಾಲನೆ ಮಾಡುವಾಗ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಅನಾಹುತಕ್ಕೆ ಆಸ್ಪದ ಕೊಡಬಾರದು. ಬೀದಿನಾಯಿಗಳ ಹತೋಟಿಗೆ ಪಂಚಾಯಿತಿ ಆಡಳಿತ ಕ್ರಮ ತೆಗೆದುಕೊಳ್ಳಬೇಕು.
ಡಿ.ಎಲ್. ತಾನ್ಯ, ವಿದ್ಯಾರ್ಥಿನಿ, ಸೋಮವಾರಪೇಟೆ.
ಪಟ್ಟಣದ ಬೀದಿಗಳಲ್ಲಿ ನಾಯಿಗಳು, ಹಸುಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೀದಿಗಳಲ್ಲಿ ನಡೆದಾಡುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ. ವಾಹನ ಚಲಾಯಿಸುವಾಗ ಪ್ರಾಣಿಗಳು ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಓಡಾಡುವುದರಿಂದ ವಾಹನ ಚಲಾಯಿಸುವವರಿಗೆ ಕಷ್ಟವಾಗುತ್ತಿದೆ. ಇದರಿಂದ ಅಪಘಾತ ಆಗುವ ಸಂಭವ ಇರುತ್ತದೆ. ಹಸುಗಳು ಸಂಜೆಯ ಸಮಯದಲ್ಲಿ ಬೀದಿಗಳಲ್ಲೇ ಮಲಗುವುದು ಹೆಚ್ಚಾಗಿ ಕಂಡು ಬರುತ್ತಿದೆ. ಹಸು ಹಾಗೂ ನಾಯಿ ಮಾಲೀಕರು ತಮ್ಮ ಮನೆಯಲ್ಲಿ ಕಟ್ಟಿ ಹಾಕಿ ಸಾಕಬೇಕು.
ಸುಮಿತ್ರಾ ಶ್ರೀರೂಪ್, ಗ್ರಾಮ ಪಂಚಾಯತಿ ಸದಸ್ಯೆ, ಬಲ್ಯಮುಂಡೂರು
ಮಡಿಕೇರಿ ನಗರದಲ್ಲೂ ಬೀದಿನಾಯಿ, ಬೀದಿ ದನಗಳ ಹಾವಳಿ ವಿಪರೀತವಾಗಿದೆ. ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರು ತಿರುಗಾಡುವುದು ಕೂಡ ಕಷ್ಟವಾಗಿದೆ. ಬೀಡಾಡಿ ದನಗಳಿಂದ ಆಗಿರುವ ಅಪಘಾತಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ನೋಡಿರಬಹುದು. ಬೀದಿ ನಾಯಿಗಳಂತೂ ಅಟ್ಟಿಸಿಕೊಂಡು ಬರುತ್ತದೆ. ಏನಾದರೂ ಅನಾಹುತ ಆದರೆ ಯಾರು ಜವಾಬ್ದಾರಿ ?
ಅಜಿತ್ ಕೊಟ್ಟಕೇರಿಯನ, ವಿದ್ಯಾನಗರ, ಮಡಿಕೇರಿ
ಸಿದ್ದಾಪುರ ಮಾರುಕಟ್ಟೆ ಬಳಿಯೇ ಕಸ ವಿಲೇವಾರಿ ಮಾಡಿರುವುದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲೇ ಸುರಿಯುವುದರಿಂದ ಬೀದಿ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದೆ. ಕಸವನ್ನು ಎಳೆದಾಡಿ ಇನ್ನಷ್ಟು ಅನೈರ್ಮಲ್ಯಗೊಳಿಸುತ್ತಿವೆ. ಹಾಗೂ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಭಯದಲ್ಲಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಜೀಜಿಲ್, ಸಿದ್ದಾಪುರ ನಿವಾಸಿ
ಬೀದಿ ನಾಯಿಗಳ ಹಾವಳಿಯಿಂದ ಹೆದ್ದಾರಿ ಮತ್ತು ಪಟ್ಟಣಗಳ ಮುಖ್ಯ ರಸ್ತೆಗಳಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದರೂ ಸಂಬAಧಿಸಿದವರು ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಂತಿದೆ. ಮಾಧ್ಯಮಗಳಲ್ಲಿ ಪ್ರತಿ ದಿನ ಈ ಬಗ್ಗೆ ಬಿತ್ತರಿಸುತ್ತಿದ್ದರೂ ಬೀಡಾಡಿ ದನಗಳನ್ನು ಮತ್ತು ಬೀದಿ ನಾಯಿಗಳನ್ನು ರಸ್ತೆಗೆ ಬಿಟ್ಟು ಚಾಲಕರು ಮತ್ತು ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿರುವುದು ಮುಂದುವರಿದಿದೆ.
ಅನಾಹುತಗಳು ಸಂಭವಿಸಿದ ನಂತರ ಜನ ಸಾಮಾನ್ಯರ ಜೀವಕ್ಕೆ ಬೆಲೆ ಕಟ್ಟುವ ಬದಲು ಬೀದಿ ನಾಯಿ ಮತ್ತು ಬೀಡಾಡಿ ದನಗಳ ಹಾವಳಿ ತಡೆಗಟ್ಟಿ ಅಮೂಲ್ಯವಾದ ಜೀವಗಳನ್ನು ಉಳಿಸಬೇಕಿದೆ.
ದಿನು ಬಾರನ, ಮದೆ ಗ್ರಾಮ
ವಿರಾಜಪೇಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಚರ್ಚ್ ರಸ್ತೆಯ ಮೂಲಕ ಹಲವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ಬೀದಿ ನಾಯಿಗಳ ಸಮೂಹ ಬೀಡುಬಿಟ್ಟಿದ್ದು, ಹಲವು ಬಾರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಸಣ್ಣ ಮಕ್ಕಳು ಒಬ್ಬೊಬ್ಬರಾಗಿ ಈ ರಸ್ತೆಯಲ್ಲಿ ಸಂಚಾರಿಸಲು ಸಾಧ್ಯವಿಲ್ಲ. ಆದ್ದರಿಂದ ಬೀದಿ ನಾಯಿಗಳ ದಾಳಿಯಿಂದ ಏನಾದರು ತೊಂದರೆ ಆಗುವ ಮೊದಲು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.
ಜೇಮ್ಸ್ ಅಂಟೋನಿ ಕೆ., ಚರ್ಚ್ ಸ್ಟಿçÃಟ್ ನಿವಾಸಿ, ವಿರಾಜಪೇಟೆ
ಬೀದಿ ನಾಯಿಗಳಿಂದ ಪ್ರತಿ ನಿತ್ಯ ತೊಂದರೆ ಎದುರಿಸುವಂತಾಗಿದೆ. ದ್ವಿಚಕ್ರ ವಾಹನ ಸವರಾರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕೆಲವರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಾಯಿಗಳನ್ನು ಹಿಡಿಯಲು ಕ್ರಮ ಇಲ್ಲದಿದ್ದರೂ, ಬೇರೆ ಏನಾದರೂ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳಿಂದ ಜನರನ್ನು ಕಾಪಾಡಬೇಕು.
ಚಂದ್ರಪ್ಪ, ನಿವೃತ್ತ ಸೈನಿಕ, ಶನಿವಾರಸಂತೆ
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಬೀದಿ ನಾಯಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆದಿದೆ. ನಾಯಿಗಳಿಗೆ ಸಂತಾನಹರಣ ಶಸ್ತçಚಿಕಿತ್ಸೆ ಮಾಡಲು ಟೆಂಡರ್ ಕರೆದರೂ ದರ ಕಡಿಮೆ ಎಂದು ಯಾರೂ ಬರುತ್ತಿಲ್ಲ. ಈ ಸಂಬAಧ ಬೇರೆ ಯಾವುದಾದರೂ ಮಾರ್ಗದ ಬಗ್ಗೆ ಪರಿಶೀಲಿಸಲಾಗುವುದು. ಬೀಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಸಂಬAಧಿಸಿದ ಇಲಾಖೆ ಜತೆ ಚರ್ಚಿಸಲಾಗುವುದು.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ