`ಸ್ತ್ರೀ' ಏಕವ್ಯಕ್ತಿ ಮಹಿಳಾ ನಾಟಕೋತ್ಸವ 6ರಿಂದ

1 Dwd 2 Aravind Kulkarni
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಅಭಿನಯ ಭಾರತಿ ವತಿಯಿಂದ ಇಲ್ಲಿನ ಸೃಜನಾ ರಂಗಮAದಿರದಲ್ಲಿ ಜು. 6 ಮತ್ತು 7ರಂದು `ಸ್ತ್ರೀ' ಏಕವ್ಯಕ್ತಿ ಮಹಿಳಾ ರಂಗಪ್ರಯೋಗಗಳನ್ನು ಏರ್ಪಡಿಸಲಾಗಿದೆ ಎಂದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 6ರಂದು ಸಂಜೆ 6 ಗಂಟೆಗೆ ಚಿದಂಬರರಾವ್ ಜಂಬೆ ನಿರ್ದೇಶನದ `ಶರ್ಮಿಷ್ಠೆ' ನಾಟಕವನ್ನು ಬೆಂಗಳೂರಿನ ರಂಗಸ0ಪದ ತಂಡದ ಉಮಾಶ್ರೀ ಪ್ರಸ್ತುತಪಡಿಸುವರು. 7ರಂದು ಸಂಜೆ 6 ಗಂಟೆಗೆ ಸುಭಾಸ ನರೇಂದ್ರ ನಿರ್ದೇಶನದಲ್ಲಿ ಹುಬ್ಬಳ್ಳಿಯ ಸುನಿಽ ಕಲಾಸೌರಭ ತಂಡದ `ಅನಾಥರ ಮಾಯಿ' ನಾಟಕವನ್ನು ವೀಣಾ ಮೋಡಕ ಪ್ರಸ್ತುತಪಡಿಸುವರು. ಅಂದು ಸಂಜೆ 7.15ಕ್ಕೆ ಶ್ರೀಪತಿ ಮಂಜನಬೈಲ್ ನಿರ್ದೇಶನದಲ್ಲಿ ಧಾರವಾಡ ಅಭಿನಯ ಭಾರತಿ ತಂಡದ ಜ್ಯೋತಿ ದೀಕ್ಷಿತ್ `ಉರಿಯ ಉಯ್ಯಾಲೆ' ನಾಟಕ ಪ್ರಸ್ತುತಪಡಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net