

ತಾವರಗೇರಾ: ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೈಕ್‌ಗಳಿಗೆ ಅಡ್ಡ ಬಂದು ಸವಾರರು ಬಿದ್ದಿರುವ ಪ್ರಸಂಗಗಳು ನಡೆದಿವೆ.
ದೇನೂರು ರಸ್ತೆ, ಸಿಂಧನೂರು ರಸ್ತೆ, ಐಬಿ ವೃತ್ತದಲ್ಲಿ ನಾಯಿಗಳು ಹಿಂಡಾಗಿ ಬಂದು ಜನರಿಗೆ ತೊಂದರೆ ಕೊಡುತ್ತಿವೆ. ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ನಗರದ ಹೊರವಲಯದ ಮಾಂಸಾಹಾರಿ ಹೋಟೆಲ್‌ಗಳ ತ್ಯಾಜ್ಯ ರಸ್ತೆ ಬದಿಗೆ ಎಸೆಯುವುದರಿಂದ ನಾಯಿಗಳು ಬರುತ್ತಿವೆ.
ಬೀದಿನಾಯಿಗಳನ್ನು ಹಿಡಿದು ದೂರಬಿಡಬೇಕು ಅಥವಾ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಸುತ್ತಲೂ ಇರುವ ಮಾಂಸಾಹಾರಿ ಹೋಟೆಲ್‌ಗಳ ಮಾಲೀಕರಿಗೆ ಹೋಟೆಲ್ ತ್ಯಾಜ್ಯವನ್ನು ಒಂದು ಕಡೆ ಶೇಖರಿಸಿ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಹಾಕಲು ತಿಳಿಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದು ಕೊಳ್ಳಲಾಗುವುದು. ನಬೀಸಾಬ ಖುದಾನವರಮುಖ್ಯಾಧಿಕಾರಿ, ಪಪಂ, ತಾವರಗೇರಾ