ವಿಷವುಣಿಸಿ 4 ಬೀದಿನಾಯಿ ಕೊಂದು ವಿಕೃತಿ

Stray Dogs 2 Jul 20
Published on

ಬೆಂಗಳೂರು: ರಾಮಮೂರ್ತಿನಗರದ ಟಿಸಿ ಪಾಳ್ಯ ಮುಖ್ಯ ರಸ್ತೆ ಬಳಿ ಅಪರಿಚಿತರು ಊಟದಲ್ಲಿ ವಿಷ ಹಾಕಿ ಬೀದಿ ನಾಯಿಗಳಿಗೆ ನೀಡಿ ವಿಕೃತಿ ಮೆರೆದಿದ್ದು, ಪರಿಣಾಮ 4 ನಾಯಿಗಳು ಮೃತಪಟ್ಟಿವೆ. ಎನಿಮಲ್ ಆೃಕ್ಟಿವಿಸ್ಟ್ ರಾಮಮೂರ್ತಿನಗರದ ಟಿಸಿ ಪಾಳ್ಯ ಮುಖ್ಯ ರಸ್ತೆಯ ನಿವಾಸಿ ತರುಣ್ ಅಗರ್‌ವಾಲ್ ನೀಡಿದ ದೂರಿನ ಆಧಾರದ ಮೇರೆಗೆ ರಾಮಮೂರ್ತಿ ನಗರ ಪೊಲೀಸರು ಎ್ಐಆರ್ ದಾಖಲಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತರುಣ್ ಮನೆ ಸಮೀಪದಲ್ಲಿದ್ದ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ನ.17ರಂದು ಅಪರಿಚಿತರು ಇವರ ಮನೆ ಸಮೀದಪಲ್ಲಿದ್ದ 6 ನಾಯಿಗಳಿಗೆ ಊಟದಲ್ಲಿ ವಿಷ ಬೆರೆಸಿ ಕೊಟ್ಟಿದ್ದರು. ಇದನ್ನು ಸೇವಿಸಿದ 4 ನಾಯಿಗಳು ಮೃತಪಟ್ಟಿವೆ. ಉಳಿದ 2 ನಾಯಿಗಳಿಗೆ ತರುಣ್ ಚಿಕಿತ್ಸೆ ಕೊಟ್ಟು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.

ನಾಯಿಗಳಿಗೆ ವಿಷವುಣಿಸಿ ಸಾಯಿಸಿದ ಅಪರಿಚಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತರುಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳೀಯ ಸಿಸಿಕ್ಯಾಮರಾ ಪರಿಶೀಲಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net