ಪ್ರವಾಸಿತಾಣದ ತಪ್ಪಲಿನಲ್ಲಿ ಬೀದಿನಾಯಿಗಳ ನಾಪತ್ತೆ, ಚಿರತೆ ಕೈವಾಡಕ್ಕೆ ಸ್ಥಳೀಯರಲ್ಲಿ ಆತಂಕ

IMG_20250530_234531.jpg
Published on

ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ಸ್ಕಂದಗಿರಿ, ಪಾಪಾಘ್ನಿ ಮಠ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಯು ನಾಯಿಗಳು ಎಳೆದುಕೊಂಡು ತಿಂದು ತೇಗುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಆತಂಕ ಮೂಡಿದೆ.
ಇತ್ತೀಚೆಗೆ ಬೀದಿನಾಯಿಗಳು, ಮನೆಯ ಆವರಣದಲ್ಲಿ ಕಟ್ಟಿ ಹಾಕಿರುವ ಸಾಕು ನಾಯಿಗಳು ಸೇರಿ ನಾಲ್ಕೆ$ದು ನಾಯಿಗಳು ನಾಪತ್ತೆಯಾಗಿವೆ. ಪ್ರಾರಂಭದಲ್ಲಿ ಒಂದೆರಡು ದಿನದಲ್ಲಿ ಮತ್ತೆ ಕಾಣಿಸಿಕೊಳ್ಳುವ ನಿರೀೆ ಹೊಂದಲಾಗಿತ್ತು. ಇದರ ನಡುವೆ ಚಿರತೆಯೊಂದು ಬಂದು ಮನೆಯ ಆವರಣದಲ್ಲಿ ನಾಯಿಯನ್ನು ಎಳೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಿಯರ ಆತಂಕ ಹೆಚ್ಚಿಸಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿದೆ. ಇದರಿಂದ ಅಧಿಕಾರಿಗಳು ಅರಣ್ಯ ಪ್ರದೇಶದ ಮೇಲೆ ನಿಗಾವಹಿಸಿದ್ದು ಚಿರತೆಗಳು ಓಡಾಡುತ್ತಿರುವುದು ಇಲ್ಲವೇ ಬೇರೆಡೆ ಹೋಗಿವೆಯೇ ಎಂಬುದನ್ನು ದೃಢಪಡಿಸಿಕೊಳ್ಳುತ್ತಿದ್ದಾರೆ.ಸ್ಥಳಿಯ ಜನರಿಗೆ ಒಬ್ಬಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಓಡಾಡದಿರಲು, ಮನೆಗಳ ಬಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಮಂಡಿಕಲ್ಲು, ವೀರದಿಮ್ಮನ ಕಣಿವೆ, ಕಳವಾರ, ಕಣಿವೆ ನಾರಾಯಣಪುರ, ನಂದಿ ಗಿರಿಧಾಮದ ಬೆಟ್ಟದ ತಪ್ಪಲು ಸೇರಿ ವಿವಿಧೆಡೆ ಆಗಾಗ ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅರಣ್ಯ ಪ್ರದೇಶದಿಂದ ಗ್ರಾಮಗಳ ಕಡೆಗೆ ಬಂದು ಹೋಗುತ್ತಿರುತ್ತವೆ. ಇದೇ ವೇಳೆ  ಜಮೀನು, ರಸ್ತೆಯ ಬದಿಯಲ್ಲಿ ಮೃಗದ ಹೆಜ್ಜೆ ಗುರುತುಗಳು ಪತ್ತೆ ಹಾಗೂ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳಿಂದ ಕಾಡುಪ್ರಾಣಿಗಳ ಚಲನವಲನ ಅರಿವಿಗೆ ಬರುತ್ತವೆ. ಇದರಿಂದ ಕಾಡಂಚಿನಲ್ಲಿ ಕೃಷಿ ಚಟುವಟಿಕೆ ನಡುಸುತ್ತಿರುವ, ಬೆಟ್ಟ&ಗುಡ್ಡಗಳಿಗೆ ರಾಸುಗಳನ್ನು ಮೇಯಿಸಲು ಹೋಗುವವರು ಆತಂಕಕ್ಕೆ ಒಳಗಾಗುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net