ಮಗುವಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ ಬೀದಿನಾಯಿಗಳು

jkd beedi nayi
ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು.
Published on

ಜಮಖಂಡಿ: ನಗರದ ಅಲ್ಲಲ್ಲಿ ಚಿಕ್ಕಮಕ್ಕಳ ಮೇಲೆ ಬೀದಿನಾಯಿಗಳ ಗುಂಪು ದಾಳಿ ನಡೆಸುತ್ತಿರುವುದರಿಂದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.

ನಗರದ ಕಡಕೋಳ ರಸ್ತೆಯ ಅರಪಾತ್ ಕಾಲನಿಯ ರಸ್ತೆಯಲ್ಲಿ ಆಟ ಆಡುತ್ತಿದ್ದ 5 ವರ್ಷದ ಉಮೇರ ಚಿಕ್ಕಮಗುವಿನ ಮೇಲೆ ಅಂದಾಜು 15 ನಾಯಿಗಳ ಗುಂಪು ದಾಳಿ ನಡೆಸಿದ್ದರಿಂದ ಮಗುವಿಗೆ ಗಂಭೀರ ಗಾಯಗಳಾಗಿವೆ.

ಕೆಲ ದಿನಗಳ ಹಿಂದೆಯೂ ನಗರದ ಅಲ್ಲಲ್ಲಿ ನಾಯಿಗಳು ಗುಂಪಾಗಿ ದಾಳಿ ನಡೆಸುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಬೀದಿನಾಯಿಗಳ ಹತೋಟಿಗೆ ಕ್ರಮ ವಹಿಸದಿರುವುದು ಮಕ್ಕಳ ಪಾಲಕರಲ್ಲಿ ಆತಂಕ ಮೂಡಿದೆ.

ದಾಳಿಗೊಳಗಾದ ಉಮೇರನ ತಂದೆ ಯಾಸೀನ್ ಪಠಾಣ ಮಾತನಾಡಿ, ನಗರದಲ್ಲಿ ಆಗಾಗ ಬೀದಿನಾಯಿಗಳ ಗುಂಪು ದಾಳಿ ನಡೆಸುತ್ತಿದ್ದರೂ ನೋಡಿ ನೋಡದಂತೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಸಂಶಯಕ್ಕೆ ಕಾರಣವಾಗಿದೆ. ನಮ್ಮ ಮಗು ಬಹಳಷ್ಟು ಗಾಯಗೊಂಡಿದೆ. ಆದರೂ ಇಲ್ಲಿತನಕ ಸೌಜನ್ಯಕ್ಕಾದರೂ ಯಾವೊಬ್ಬ ಅಧಿಕಾರಿಗಳು ಬಂದು ವಿಚಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net