

ಕೆಜಿಎಫ್: ಜಿಲ್ಲೆಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದ್ದು, ಕೆಜಿಎಫ್ನ ಬಾಲಕೃಷ್ಣ ಬಡಾವಣೆಯಲ್ಲಿ ಸೋಮವಾರ 4 ವರ್ಷದ ಬಾಲಕನನ್ನು ಅಟ್ಟಾಡಿಸಿ ದಾಳಿ ಮಾಡಿದ್ದು, ದೇಹದ ವಿವಿಧೆಡೆ ಕಚ್ಚಿ ಗಾಯಗೊಳಿಸಿವೆ.
ಅಸ್ಸಾಂ ಮೂಲದ ಅಲೆಕ್ಸ್ (4) ಗಾಯಗೊಂಡ ಬಾಲಕ
ಅಸ್ಸಾಂ ಮೂಲದ ದಂಪತಿ ಸ್ಥಳಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ರಸ್ತೆಯಲ್ಲಿ ಮಗು ನಡೆದು ಹೋಗುತ್ತಿದ್ದಾಗ ನಾಯಿಗಳ ದಂಡು ದಾಳಿ ಮಾಡಿವೆ. ದಾಳಿಯಿಂದ ರಕ್ಷಣೆಗಾಗಿ ಬಾಲಕ ಓಡುವಾಗ ಕೆಳಕ್ಕೆ ಬಿದ್ದು ಚೀರಾಡಿದರೂ ಬಿಡದ ಶ್ವಾನಗಳು ಕಚ್ಚಿ ಗಾಯಗೊಳಿಸಿವೆ. ಬಾಲಕನ ಚೀರಾಟ ಕೇಳಿ ಅಕ್ಕಪಕ್ಕದ ಮನೆಗಳವರು ಬಂದು ನಾಯಿಗಳನ್ನು ಓಡಿಸಿದ್ದಾರೆ. ತೀವ್ರ ಗಾಯಗೊಂಡ ಬಾಲಕನನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.