ಅವಳಿ ನಗರದಲ್ಲಿ ಬೀದಿ ನಾಯಿಗಳ ಬಂಧನ

Stray dogs arrested in twin cities
ರಬಕವಿ ಬನಹಟ್ಟಿ ಅವಳಿ ನಗರದಲ್ಲಿದ್ದ ಬೀದಿ ನಾಯಿಗಳನ್ನು ಪರಿಣಿತರು ಹಿಡಿದು ಪಂಜರದಲ್ಲಿ ಬಂಧಿಸಿ, ಸೂಕ್ತ ಸ್ಥಳಕ್ಕೆ ಕೊಂಡೊಯ್ದರು.
Published on

ರಬಕವಿ-ಬನಹಟ್ಟಿ: ಪಟ್ಟಣದ ವಿವಿಧ ಬೀದಿಗಳಲ್ಲಿ ಹೆಚ್ಚಾಗಿದ್ದ ಬೀದಿ ನಾಯಿಗಳ ಉಪಟಳಕ್ಕೆ ಕೊನೆಗೂ ಅಂತ್ಯ ಬಿದ್ದಿದೆ. ನಗರಸಭೆ ಅಧಿಕಾರಿಗಳು ಮಂಗಳವಾರ ಪರಿಣಿತ ನಾಯಿ ಹಿಡಿಯುವವರನ್ನು ಕರೆಸಿ ಅವಳಿ ನಗರದಲ್ಲಿ 88ಕ್ಕೂ ಅಧಿಕ ನಾಯಿಗಳನ್ನು ಮೊದಲ ಹಂತದಲ್ಲಿ ಹಿಡಿದು ಸಾಗಿಸಿದ್ದಾರೆ.

ಬೀದಿ ನಾಯಿಗಳ ಹಾವಳಿಯ ಬಗ್ಗೆ ‘ವಿಜಯವಾಣಿ’ ಇತ್ತೀಚೆಗೆ ವರದಿ ಮಾಡಿ ಸಂಬಂಧಿತರ ಗಮನ ಸೆಳೆದಿತ್ತು. ನಾಯಿಗಳು ದಾರಿ ಹೋಕರ ಮೇಲೆ ದಿಢೀರ್ ದಾಳಿ ಮಾಡುವುದು, ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗಿ ಅವರು ದಿಕ್ಕು ತಪ್ಪಿ ಅಪಘಾತಕ್ಕೀಡಾದ ಪ್ರಕರಣಗಳು ಹೆಚ್ಚಾಗಿದ್ದವು. ರಾತ್ರಿ ವೇಳೆ ಗುಂಪಾಗಿ ಜನರ ಮೇಲೆ ಎರಗುತ್ತಿದ್ದವು. ಸದ್ಯ ನಾಯಿಗಳನ್ನು ಹಿಡಿದು ಒಯ್ದಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ತಂದಿದೆ.

ಬನಹಟ್ಟಿ ವ್ಯಾಪಾರಿ ಬಸವರಾಜ ಹಟ್ಟಿ ಮಾತನಾಡಿ, ಬೀದಿ ನಾಯಿಗಳ ಕಾಟಕ್ಕೆ ಹೆದರಿ ಶಾಲೆ ಬಸ್‌ಗೆ ಮಕ್ಕಳನ್ನು ಹತ್ತಿಸಲು, ಕರೆದೊಯ್ಯಲು ಪಾಲಕರೇ ಬರಬೇಕಿತ್ತು. ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ನಾಯಿಗಳನ್ನು ಹಿಡಿದೊಯ್ದಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ತಡೆಗೆ ಪಶುಪಾಲನಾ ಇಲಾಖೆ ಗಮನಕ್ಕೆ ತಂದು ಸೂಕ್ತ ಕ್ರಮವನ್ನು ಕಾನೂನಿನಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಜನತೆ ನಿರಾತಂಕವಾಗಿ ಸಂಚರಿಸಬಹುದು. ರಮೇಶ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net