ನಗರದಲ್ಲಿ  ನಿಲ್ಲದ ಬೀದಿ ನಾಯಿಗಳ ಉಪಟಳ

IMG-20230224-WA0038.jpg
Published on


ಬೆಳಗಾವಿ: ಇಲ್ಲಿನ ಅನಗೋಳದ ಇಂದಿರಾ ನಗರದಲ್ಲಿ  ಶುಕ್ರವಾರ ಬೀದಿ ನಾಯಿ ನಡೆಸಿದ  ದಾಳಿಯಿಂದ ತೀವ್ರ ಗಾಯಗೊಂಡು ಐದು ವರ್ಷದ ಬಾಲಕನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಂದಿರಾ ನಗರದ ಶಿವರಾಜ ಮೌರ್ಯ (5) ಚಿಕಿತ್ಸೆ ಪಡೆಯುತ್ತಿರುವ ಬಾಲಕ. ಮನೆಯ ಅಂಗಳದಲ್ಲಿ ಶುಕ್ರವಾರ ಆಟುವಾಡುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿದೆ. ಈ ವೇಳೆ ಬಾಲಕ ಚಿರಾಟ ಕೇಳಿದ ನೆರೆಯ ಮನೆಯವರು ದಾವಿಸಿ ಬಾಲಕನನ್ನು ರಕ್ಷಿಸಿ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿಸುವ ಬಾಲಕನನ್ನು  ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ನಗರದ ವಸತಿ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳು ಹೆಚ್ಚಾಗಿದೆ ಮತ್ತೊಂದೆಡೆ ನಗರದಲ್ಲಿ ಕುರಿ, ಕೋಳಿ, ಮೀನು ಹಾಗೂ ದನದ ಮಾಂಸ ಮಾರಟಕ್ಕೆ ಆಧುನಿಕ ಹಾಗೂ ಸುಸಜ್ಜಿತವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ರಸ್ತೆ ಬದಿ, ಚರಂಡಿಗಳಲ್ಲಿ ಮಾಂಸದ ತ್ಯಾಜ್ಯವನ್ನು  ಎಸೆಯಲಾಗುತ್ತಿದೆ. ಇದನ್ನು ತಿನ್ನಲು ಬೀದಿ ನಾಯಿಗಳು ಬರುತ್ತಿವೆ. ರಸ್ತೆಯ ಮೇಲೆ ಓಡಾಡುವ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿವೆ. ಕೂಡಲೇ ಮಹಾನಗರ ಪಾಲಿಕೆಯು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ತ್ಯಾಜ್ಯ ವಿಲೇವಾರಿ   ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಅನಗೋಳ ನಿವಾಸಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net