ಮಾಲ್ದಾರೆಯಲ್ಲಿ ಬೀದಿ ನಾಯಿಗಳ ಕಾಟ

Oplus_16908288
Oplus_16908288
Published on

ಸಿದ್ದಾಪುರ: ಕಾಡುಪ್ರಾಣಿಗಳ ಭಯದ ನಡುವೆ ಜೀವನ ನಡೆಸುತ್ತಿರುವ ಮಾಲ್ದಾರೆ ಸುತ್ತಮುತ್ತಲ ನಿವಾಸಿಗಳಿಗೆ ಇದೀಗ ಬೀದಿನಾಯಿಗಳ ಕಾಟ ಅಧಿಕವಾಗಿದೆ.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಮಾಲ್ದಾರೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸಾರ್ವಜನಿಕರು, ಕಾರ್ಮಿಕರು ಪಾಲ್ಗೊಂಡು ಬೀದಿನಾಯಿಗಳ ಉಪಟಳ ಮಿತಿ ಮೀರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಸೇರಿದಂತೆ ಸಮೀಪದ ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಗುಡ್ಲೂರು, ಜನತಾ ಕಾಲನಿ, ಕಲ್ಲಳ್ಳ, ಕಾಡಂಗಡಿ ಗ್ರಾಮಗಳಲ್ಲಿ ಬೀದಿನಾಯಿಗಳ ಕಾಟ ಅಧಿಕವಾಗಿದೆ. ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದ್ದು, ಕೆಲವೆಡೆ ಬೀದಿನಾಯಿಗಳ ದಾಳಿಗೆ ಸಾರ್ವಜನಿಕರು ಗಾಯಗೊಂಡ ಘಟನೆಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತೀಚೆಗೆ ಗ್ರಾಮದಲ್ಲಿ ಇದ್ದಕ್ಕಿದ್ದಂತೆ 50ಕ್ಕೂ ಹೆಚ್ಚು ಬೀದಿನಾಯಿಗಳು ದಿಢೀರ್ ಕಾಣಿಸಿಕೊಂಡಿದ್ದು, ಯಾರೋ ನಾಯಿಗಳನ್ನು ಬೇರೆ ಗ್ರಾಮದಲ್ಲಿ ಹಿಡಿದು ತಂದು ಬಿಟ್ಟಿದ್ದಾರೆ. ಇದರಿಂದಾಗಿ ನಾಯಿಗಳು ಆಹಾರಕ್ಕಾಗಿ ಮನೆ, ಹೋಟೆಲ್, ಅಂಗಡಿಗಳ ಮುಂದೆ ಜಮಾಯಿಸುತ್ತಿವೆ. ಗ್ರಾಮಸ್ಥರು ಭಯಭೀತರಾಗಿದ್ದು ಒಬ್ಬರೆ ಓಡಾಡಲು ಭಯಪಡುವಂತಾಗಿದೆ. ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುವ ಕಾರ್ಮಿಕರು ಬೀದಿನಾಯಿಗಳ ಹಾವಳಿಯಿಂದ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ಬೇರೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದ್ದ ನಾಯಿಗಳನ್ನು ಮಾಲ್ದಾರೆ ಗ್ರಾಮ ಸಮೀಪದ ಅರಣ್ಯದಂಚಿನಲ್ಲಿ ಇರುವ ಚೆಕ್ ಪೋಸ್ಟ್ ಬಳಿ ಬಿಟ್ಟು ಹೋಗಿದ್ದಾರೆ. ಕೆಲವು ಬೀದಿನಾಯಿಗಳು ಅಕ್ಕ ಪಕ್ಕದ ಗ್ರಾಮ ಗಳಿಗೆ ತೆರಳಿದ್ದು, ಉಳಿದ ನಾಯಿಗಳು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಇದರಿಂದಾಗಿ ಪ್ರತಿದಿನ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಾಡಿನಿಂದ ಆಹಾರಕ್ಕಾಗಿ ಗ್ರಾಮಕ್ಕೆ ಬರುತ್ತಿರುವ ಜಿಂಕೆಗಳನ್ನು ಕೊಲ್ಲುತ್ತಿವೆ. ಈಗಾಗಲೇ ಕೆಲ ಜಿಂಕೆಗಳು ನಾಯಿಗಳ ಆಹಾರವಾಗಿವೆ. ಸೆರೆ ಹಿಡಿದ ನಾಯಿಗಳನ್ನು ತಂದು ಬಿಟ್ಟಿರುವವರ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net