ಬೀದಿನಾಯಿ ಕಡಿತ, ಆರು ಮಂದಿಗೆ ಗಾಯ

New Project (20)
Published on

ಕಾಸರಗೋಡು: ನೀರ್ಚಾಲು ಏಣಿಯರ್ಪು ಆಸುಪಾಸು ಬೀದಿನಾಯಿಗಳ ದಾಳಿಯಿಂದ ಮೂರರ ಹರೆಯದ ಬಾಲಕಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಆಟೋ ಚಾಲಕ ಹರಿಹರನ್ ಎಂಬುವರ ಪುತ್ರಿ ನವಣ್ಯಾ, ಬಿರ್ಮಿನಡ್ಕ ನಿವಾಸಿ ಅಂಗನವಾಡಿ ನೌಕರೆ ಅಶ್ವತಿ, ರಿಸ್ವಾನ್, ಪುದುಕ್ಕೋಳಿ ನಿವಾಸಿ ಶಾಂತಿ, ಚಂದ್ರನ್, ಬದಿಯಡ್ಕ ನಿವಾಸಿ ಗಣೇಶ್ ಗಾಯಾಳುಗಳು. ಬಾಲಕಿ ನವನ್ಯಾ ಮನೆ ಸಿಟೌಟ್‌ನಲ್ಲಿ ಆಟವಾಡುತ್ತಿದ್ದ ಸಂದರ್ಭ ಬೀದಿನಾಯಿಗಳ ಗುಂಪು ದಾಳಿ ನಡೆಸಿದೆ. ಗಾಯಾಳುಗಳು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net