ಬೀದಿ ನಾಯಿಗಳ ಹಾವಳಿ: 15 ಜನರಿಗೆ ಗಾಯ

raichur
raichur
Published on

ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಳೆದ ಎರಡು ದಿನದಲ್ಲಿ 15 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ.

ನಗರದ ಮಾವಿನಕರೆ, ಗಂಗಾನಿವಾಸ, ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಹುಚ್ಚುನಾಯಿ ಕಡಿತ ಶಂಕೆ ಹಿನ್ನೆಲೆ ಗಾಯಾಳುಗಳು ಆತಂಕದಲ್ಲಿದ್ದಾರೆ. ನಾಯಿಗಳು ಮಕ್ಕಳು, ಮಹಿಳೆಯರು ಎನ್ನದೆ ಸಿಕ್ಕಸಿಕ್ಕವರ ಕೈ, ಕಾಲಿಗೆ ಕಚ್ಚಿ ಗಾಯಗೊಳಿಸಿವೆ.

8 ಜನ ಗಾಯಾಳುಗಳು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ನವೀದ್ ಬೇಗ್, ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮದ್ ಗೌಸ್ ಸೇರಿ 15 ಜನರಿಗೆ ಗಾಯಗಳಾಗಿವೆ. ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿದ್ದು ಮಹಾನಗರ ಪಾಲಿಕೆ ವಿರುದ್ದ ಗಾಯಾಳುಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳನ್ನು ಹಿಡಿದು ಸ್ಥಳಾಂತರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net