ತಾವರಗೇರಾ: ಪಟ್ಟಣದ ವಿವಿಧೆಡೆ ಬಿಡಾಡಿ ದನಗಳು ರಸ್ತೆಯಲ್ಲಿ ಠಿಕಾಣಿ ಹೂಡುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಅಪಘಾತವಾಗುವ ಭೀತಿ ಹೆಚ್ಚಿದೆ. ಆದ್ದರಿಂದ ದನಗಳ ಮಾಲೀಕರು ಬೀದಿಗೆ ಬಿಡದೆ ತಮ್ಮ ಮನೆ ಹತ್ತಿರ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಬಿಡಾಡಿ ದನಗಳೆಂದು ಪರಿಗಣಿಸಿ ಗೋಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.