ಸಿಂಧೂರ ವಿಜಯೋತ್ಸವ ಯಶಸ್ಸಿಗೆ ಕಾರ್ಯತಂತ್ರ

ನಾಪೋಕ್ಲುವಿನ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿಯಲ್ಲಿ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ನಾಪೋಕ್ಲುವಿನ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿಯಲ್ಲಿ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
Published on

ನಾಪೋಕ್ಲು: ಮಡಿಕೇರಿಯಲ್ಲಿ ಮೇ 23ರಂದು ನಡೆಯುವ ಸಿಂಧೂರ ವಿಜಯೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮವಾರ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಸಂಪರ್ಕ ಸಭೆ ಆಯೋಜಿಸಲಾಗಿತ್ತು.

ಸಂಪರ್ಕ ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ ಬೋಪಯ್ಯ ಭಾಗವಹಿಸಿದ್ದರು. ಸಿಂಧೂರ ವಿಜಯೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವುದರ ಜತೆಗೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶೀವಚಾಳಿಯಡ ಅಂಬಿ ಕಾರ್ಯಪ್ಪ , ಜಗದೀಶ್, ಕಂಗಂಡ ಜಾಲಿ ಪೂವಪ್ಪ, ಕನ್ನಂಬೀರ ಸುಧಿ ತಿಮ್ಮಯ್ಯ, ಪಾಡಿಯಮ್ಮಡ ಮನು ಮಹೇಶ್, ಚಂದ್ರ ಉಡೋತ್, ಪ್ರಕಾಶ್, ಪಟ್ರಪಂಡ ನಿರನ್, ಚೋಕಿರ ಸಜಿತ್, ಅರೆಯಡ ನಂದ, ರವಿ ಮಕ್ಕಿ ,ಉದಯ ಶಂಕರ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net