2.30 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮರು

Cibra
Published on

ರಾಣೆಬೆನ್ನೂರ: ಅಪರಿಚಿತ ವ್ಯಕ್ತಿಯೊಬ್ಬ ಮಾಡಿದ ಕರೆ ಸ್ವೀಕರಿಸಿ 26 ಸೆಕೆಂಡ್​ ಮಾತನಾಡಿದ್ದಕ್ಕೆ ಬ್ಯಾಂಕ್​ ಖಾತೆಯಿಂದ 2.30 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆಯಾದ ಘಟನೆ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಹೊನ್ನತ್ತಿ ಗ್ರಾಪಂಯ ಡಾಟಾ ಆಪರೇಟರ್​ ರಮೇಶ ಭರಮಪ್ಪ ತಂಬೂರಿ (38) ಎಂಬುವರ ಹಣ ಬೇರೆ ಬೇರೆ ಖಾತೆಗೆ ಹೋಗಿರುವುದು.

ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್​ ಮಾಡಿ 26 ಸೆಕೆಂಡ್​ ಮಾತನಾಡಿದ್ದಾನೆ. ಅಷ್ಟರಲ್ಲಿ ಇವರ ಮೊಬೈಲ್​ಗೆ 500 ರೂ. ಕಟ್​ ಆಗಿರುವ ಮೇಸೆಜ್​ ಬಂದಿದೆ. ಕೂಡಲೇ ಅವರು ಬ್ಯಾಂಕ್​ಗೆ ತೆರಳಿ ಪರಿಶೀಲಿಸಿದಾಗ 2.30 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net