ಅಪರಿಚಿತನ ಅನುಮಾನಾಸ್ಪದ ಓಡಾಟದಿಂದ ನಿದ್ದೆ ಕೆಟ್ರು ಬೀದರ್ ಜನ...

Stranger in bidar 6 APR 20
Published on

ಬೀದರ್: ನಗರದ ಬ್ರಹ್ಮಪುರ, ಸಾಯಿ ಕಾಲನಿಯಲ್ಲಿ ಕಳೆದ ರಾತ್ರಿ ಮುಸ್ಲಿಂ ವ್ಯಕ್ತಿ ಯೊಬ್ಬ ಹತ್ತಾರು ಮನೆಗಳಿಗೆ ಲಗ್ಗೆ ಇಟ್ಟಿದ್ದು, ಕರೊನಾ ಸೋಂಕಿತ ತಬ್ಲಿಘಿ ಸಂಘಟನೆಯವ ಈತ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಈತ ಅನುಮಾನಸ್ಪದವಾದ ರೀತಿಯಲ್ಲಿ ಮನೆಗಳಿಗೆ ತಿರುಗಿ, ಮನೆ ಎದುರು ಉಗುಳುವುದು, ಕೆಮ್ಮುವುದು, ಸೀನುವುದು ಹಾಗೂ ಗೇಟ್, ಗೋಡೆ, ಬಾಗಿಲಿಗೆ ಕರವಸ್ತ್ರ ಒರೆಸುವುದು ಮಾಡಿದ್ದಾನೆ. ಇದರಿಂದ ಭಯಭೀತರಾದ ಬಡಾವಣೆ ಜನರು. ಎಲ್ಲರಲ್ಲೂ ಕರೊನಾ ಆತಂಕ ತಲ್ಲಣವೇ ಸೃಷ್ಟಿಸಿದೆ.

40 ವರ್ಷದ ಈತನನ್ನು ಸ್ಥಳೀಯರು ಹಿಡಿದಿದ್ದಾರೆ‌. ಆದರೆ, ಯಾರೂ ಮುಟ್ಟಿಲ್ಲ. ಓಡಿ ಹೋಗುವ ಪ್ರಯತ್ನ ಮಾಡಿದಾಗ ದೂರದಿಂದಲೇ ಜನರು ಘೇರಾವ್ ಹಾಕಿದ್ದಾರೆ. ಕೈಯಲ್ಲಿ ದೊಣ್ಣೆ, ಕಲ್ಲು ಹಿಡಿದು ಘೇರಾವ್ ಹಾಕಿ ಹಿಡಿದು ಪೊಲೀಸರನ್ನು ಕರೆಯಿಸಿ ಅವರಿಗೆ ಈತನನ್ನು ಒಪ್ಪಿಸಿದ್ದಾರೆ.

ಸ್ಥಳಕ್ಕೆ ಭೇಟಿ‌ ನೀಡಿದ ಗಾಂಧಿಗಂಜ್ ಪೊಲೀಸರು ಈತನಿಗೆ ಹಿಡಿದೊಯ್ದಿದ್ದಾರೆ. ಈತ ಯಾರು? ಎಲ್ಲಿಂದ ಬಂದ? ಈತ ಕರೊನಾ ಸೋಂಕಿತನೆ? ಎಂಬಿತ್ಯಾದಿ ವಿಚಾರಣೆ ‌ನಡೆದಿವೆ. ಈತ ಮಾನಸಿಕ ಅಸ್ವಸ್ಥತೆ ಎಂದು ಹೇಳಲಾಗುತ್ತಿದೆ. ಆದರೆ ಈತನ ಬಗ್ಗೆ ಸಮಗ್ರ ವಿಚಾರಣೆ‌ ನಡೆಸಿ, ಕರೊನಾ ಪರೀಕ್ಷೆಗೆ ಒಳಪಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ನಗರದಲ್ಲೇ ತಬ್ಲಿಘಿ ಜಮಾತ್ ಗೆ ಹೋಗಿ ಬಂದಿದ್ದ 8 ಮಂದಿಗೆ ಕರೊನಾ ಸೋಂಕು ತಗುಲಿದೆ. ಈ ಬೆಳವಣಿಗೆಯಿಂದ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ. ಈತ ಕರೊನಾ ಸೋಂಕಿತ ಇರಬಹುದಾ? ಇದನ್ನು ಹರಡುವುದಕ್ಕೆ ಹೀಗೆ ಮಾಡಿರಬಹುದಾ ಎಂಬ ಪ್ರಶ್ನೆ ಸ್ಥಳೀಯರಿಗೆ ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net