ಒಲೆ ಮುಂದೆ ಅಡುಗೆ ಮಾಡುತ್ತಿದ್ದ ವೃದ್ಧೆ ಬೆಂಕಿ ತಗುಲಿ ಸಾವು

Crime Logo
Published on

ಹಾವೇರಿ: ಒಲೆಯ ಮುಂದೆ ಅಡುಗೆ ಮಾಡುತ್ತಿದ್ದ ವೃದ್ಧೆಯೊಬ್ಬರು ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಕಾಟೇನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಹುಸೇನಬಿ ಖಾಸೀಮಸಾಬ ನದಾಫ್​ (79) ಮೃತ ವ್ಯಕ್ತಿ.

ಇವರು ಒಲೆ ಮುಂದೆ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಅವರ ಬಟ್ಟೆಗೆ ತಗುಲಿ ಹತ್ತಿಕೊಂಡಿದೆ. ಇದರಿಂದ ಸುಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net