

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆನಂದ ಚಿಗಟೇರಿ ದತ್ತಿ ನಿಮಿತ್ತ ಮಹಿಳಾ ಮಂಡಳಗಳ ಸದಸ್ಯರಿಗೆ ಗಾದೆ ಮಾತುಗಳ ಆಧಾರಿತ ಕಥೆ ಹೇಳುವ ಸ್ಪರ್ಧೆಯನ್ನು ನ. 14ರಂದು ಮಧ್ಯಾಹ್ನ 2.30 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಏರ್ಪಡಿಸಿದೆ.
ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು, ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಗಾದೆ ಮಾತುಗಳ ಪೈಕಿ ಒಂದು ಗಾದೆ ಮಾತಿನ ಅರ್ಥ ಬರುವ ಕಥೆ ಹೇಳಬೇಕು. ಪ್ರತಿ ಮಹಿಳಾ ಮಂಡಳದಿಂದ ಇಬ್ಬರು ಸದಸ್ಯರು ಭಾಗವಹಿಸಬಹುದು, ಸ್ಪರ್ಧಾಳುಗಳಿಗೆ 5 ನಿಮಿಷ ಕಾಲಾವಕಾಶ ಇರಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಆಸಕ್ತರು ನ. 12ರೊಳಗೆ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.