ಬಿರುಗಾಳಿ, ಮಳೆಗೆ ಹಾನಿ

Storm, rain damage
ಹೂವಿನಹಿಪ್ಪರಗಿ ಗ್ರಾಮದ ಸಂತೋಷ ಹಡಪದ ಅವರ ತೋಟದಲ್ಲಿನ ಶೆಡ್​ಗೆ ಮಳೆ& ಬಿರುಗಾಳಿಗೆ ಹಾನಿಯಾಗಿದ್ದನ್ನು ಗ್ರಾಮ ಆಡಳಿತ ಅಧಿಕಾರಿ ಎ.ಬಿ.ಚವ್ಹಾಣ, ಗ್ರಾಮ ಸಹಾಯಕ ಹೂನ್ನಪ್ಪ ವಾಲಿಕಾರ ಪರಿಶೀಲಿಸಿದರು.
Published on

ಹೂವಿನಹಿಪ್ಪರಗಿ: ಗ್ರಾಮದಲ್ಲಿ ಶನಿವಾರ ಸಂಜೆ ಮಳೆ ಹಾಗೂ ಬಿರುಗಾಳಿಗೆ ಗಿಡಮರಗಳು, ವಿದ್ಯುತ್​ ಕಂಬಗಳು ನೆಲಕ್ಕುರುಳಿ ಬಿದ್ದಿವೆ. ಮಳೆ ಗಾಳಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಸಂತೋಷ ಹಡಪದ ಅವರ ತೋಟದಲ್ಲಿದ್ದ ಶೆಡ್​ಗೆ ಹಾನಿಯಾಗಿದೆ. ಬಿತ್ತನೆಗಾಗಿ ಇಟ್ಟಿದ್ದ ಗೊಬ್ಬರ, ತೊಗರಿ ಬೀಜ ಹಾಗೂ ಒಂದು ಕ್ವಿಂಟಾಲ್​ ಜೋಳ ನೀರು ಪಾಲಾಗಿದೆ. ಪತ್ರಾಸ್​ ಶೆಡ್​ ಹಾರಿ ಶೆಡ್​ನಲ್ಲಿದ್ದ ಇಬ್ಬರಿಗೆ ಸಣ್ಣ&ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಗ್ರಾಮದ ಪ್ರಮೋದ ಸಾಸನೂರ ಅವರ ಮನೆಯ ಪತ್ರಾಸ್​ ಹಾರಿ 4 ಕ್ವಿಂಟಾಲ್​ ಜೋಳ, 1 ಕ್ವಿಂಟಾಲ್​ ಗೋಧಿ, ತೋಗರಿ ಬೀಜ ಸೇರಿ ಮನೆಯಲ್ಲಿಯ ಎಲ್ಲ ವಸ್ತುಗಳು ನೀರು ಪಾಲಾಗಿವೆ.

ಭೀಮನಗೌಡ ನಾಡಗೌಡ ಅವರ ಮನೆ ಮೇಲೆ ಮರ ಬಿದ್ದು ಪತ್ರಾಸ್​ಗಳು ಜಖಂಗೂಂಡಿವೆ. ಭಾನುವಾರ ಬೆಳಗ್ಗೆ ಗ್ರಾಮ ಆಡಳಿತ ಅಧಿಕಾರಿ ಎ.ಬಿ.ಚವ್ಹಾಣ ಹಾಗೂ ಗ್ರಾಮ ಸಹಾಯಕ ಹೂನ್ನಪ್ಪ ವಾಲಿಕಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net