ಬಿರುಗಾಳಿಗೆ ಬಿದ್ದ ಮರಗಳು

27-05.MDL.01
Published on

ಮುದಗಲ್: ಮುಂಗಾರು ಬಿತ್ತನೆಗೆ ಪ್ರಮುಖವಾಗಿರುವ ರೋಹಿಣಿ ಮಳೆ ಭಾನುವಾರ ಸಂಜೆ ಸುರಿದು ಭೂಮಿಯನ್ನು ತಂಪಾಗಿಸಿದರೆ, ಮಳೆಯೊಂದಿಗೆ ಬೀಸಿದ ಗಾಳಿ ಹಲವು ಅನಾಹುತಗಳನ್ನು ಸೃಷ್ಟಿಸಿದೆ.

ಮಿಂಚು-ಗಾಳಿಯೊಂದಿಗೆ ಒಂದು ತಾಸಿಗೂ ಅಧಿಕ ಸುರಿದ ಮಳೆಯಿಂದಾಗಿ ಮುಂಗಾರು ಬಿತ್ತನೆಗೆ ಹದ ಮಾಡಿದ್ದ ಜಮೀನುಗಳಿಗೆ ತೇವಾಂಶ ನೀಡಿತು. ಮಳೆಯೊಂದಿಗೆ ಬಿರುಗಾಳಿ ಬೀಸಿದ್ದರಿಂದ ಅನೇಕ ಗಿಡಗಳು ನೆಲಕ್ಕೆ ಉರುಳಿದರೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಮುದಗಲ್ ಕನ್ನಾಪುರಹಟ್ಟಿ, ಅಡವಿಬಾವಿ, ಯರದಿಹಾಳ, ಆಶಿಹಾಳ, ಮೇಗಳಪೇಟೆ ಸೇರಿ ಅನೇಕ ಕಡೆ ಗಿಡಗಳು ಉರುಳಿವೆ. ವಿದ್ಯುತ್ ಕಂಬಗಳು ಜಖಂಗೊಂಡಿದ್ದರಿಂದ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಎಂಟು ತಾಸಿಗೂ ಅಧಿಕ ಸಮಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net