ಗಾಳಿಗೆ ಉರುಳಿ ಬಿದ್ದ ಮಳಿಗೆಗಳು

Stores blown down by the wind
Published on

ಮುಧೋಳ: ರನ್ನ ವೈಭವದಲ್ಲಿ ಹಾಕಿರುವ ಸುಮಾರು 20 ಮಳಿಗೆಗಳು ಸೋಮವಾರ ಉರುಳಿ ಬಿದ್ದವು.

ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಸುಮಾರು 40 ಮಳಿಗೆ ನಿರ್ಮಿಸಲಾಗಿತ್ತು. ಮಳಿಗೆಗಳು ಸಹಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಆದರೆ, ಕೊನೆ ದಿನ ಸೋಮವಾರ ಬೇಸಿಗೆಯಲ್ಲೂ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಗೆ ಮಳಿಗೆಗಳು ನೆಲಕ್ಕುರಳಿವೆ. ಆರೋಗ್ಯ, ಕೃಷಿ, ತೋಟಗಾರಿಕೆ, ತಿಂಡಿ ತಿನಸು, ಬಟ್ಟೆ, ಆಕರ್ಷಕ ವಸ್ತುಗಳ ಮಾರಾಟ ಮತ್ತು ಮಾಹಿತಿ ಕೇಂದ್ರಗಳ ವಸ್ತುಗಳು ಭಗ್ನವಾಗಿವೆ.

ಲಕ್ಷಾಂತರ ರೂ. ಖರ್ಚು ಮಾಡಿದ ನಿರ್ಮಿಸಿದ್ದ ಕಲಾಕೃತಿಗಳು ಮುರಿದಿವೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net