ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಯುವಕರದ್ದು ಮಹತ್ವದ ಪಾತ್ರ

udp-5-sanmana
Published on

ಉಡುಪಿ: ಕೌಟುಂಬಿಕ ಜೀವನದಲ್ಲಿ ಉಂಟಾಗುವ ಮನಸ್ತಾಪಗಳಿಂದ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಹಾಳಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಉತ್ಸಾಹಿಗಳು ಹಮ್ಮಿಕೊಂಡ ಸ್ಟಾಪ್​ ವೈಲೆನ್ಸ್​ ಬೈಕ್​ ಜಾಥಾ ಶ್ಲಾನೀಯವಾಗಿದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ "ಹಿಂಸೆ ನಿಲ್ಲಿಸಿ' ಜನಜಾಗೃತಿ ಬೈಕ್​ ಜಾಥಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ಟಾಪ್​ ವೈಲೆನ್ಸ್​ ಘೋಷವಾಕ್ಯದೊಂದಿಗೆ ಕರ್ನಾಟಕ, ಗೋವಾ ಮಹಾರಾಷ್ಟ್ರ ಸೇರಿ 3 ಸಾವಿರ ಕಿಮೀ ಬೈಕ್​ ಜಾಥಾ ನಡೆಸಿರುವುದು ಸಣ್ಣ ಸಾಧನೆಯಲ್ಲ. ಯುವಕರು ಹಿಂಸೆ, ದುಶ್ಚಟ, ಡ್ರಗ್ಸ್​ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬೈಕ್​ ಸವಾರರಾದ ದೃಶ್​ ಕೊಡಗು ಮತ್ತು ಉಜ್ವಲ್​ ಕಾಮತ್​ ಅವರನ್ನು ಸನ್ಮಾನಿಸಲಾಯಿತು. ಎಎಸ್ಪಿ ಪಿ.ಎ. ಹೆಗಡೆ, ಉದ್ಯಮಿ ರಂಜನ್​ ಕಲ್ಕೂರ್​, ರೋಟರಿ ಗವರ್ನರ್​ ಸಿಎ ದೇವಾನಂದ್​, ಸುದೀಪ್​ಕುಮಾರ್​ ಮಂಜ, ಪ್ರಭಾಕರ ಪೂಜಾರಿ, ಸುರೇಶ್​ ಸುವರ್ಣ ಕುರ್ಕಾಲು, ರಮಾಕಾಂತ ಪೂಜಾರಿ, ರಂಜಿತಾ ಶೇಟ್​ ಉಪಸ್ಥಿತರಿದ್ದರು. ಬಾಸುಮ ಕೊಡಗು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net