ತಂಬಾಕು ಉತ್ಪನ್ನಗಳ ಮಾರಾಟ ನಿಲ್ಲಿಸಿ

13-10-Shiva-1
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟವನ್ನು ನಿಷೇಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಎಬಿವಿಪಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಪರಿಷತ್ ನಗರ ಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು, ಶಾಂತಕುಮಾರ, ಅಜೀತ್ ರಾಜಕುಮಾರ, ಚನ್ನಬಸವ, ಶ್ರೀನಿವಾಸ, ದೇವರಾಜ, ವೀರೇಶ ಇದ್ದರು.
Published on

ರಾಯಚೂರು: ಸಾರ್ವಜನಿಕ ಸ್ಥಳಗಳ್ಲಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಸಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
ಪರಿಷತ್ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ತಂಬಾಕು ಸೇವನೆಯಿಂದ ಯುವಜನತೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇವನೆ ನಿಷೇಧವಿದ್ದರೂ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು.
ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಯುವ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ನಿಯಮಿತವಾಗಿ ತಪಾಸಣೆ ಮತ್ತು ಆದೇಶ ಉಲ್ಲಂಸುವವರಿಗೆ ದಂಡ ವಿಸುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
ನುರಿತ ವೈದ್ಯರಿಂದ ಹಾಗೂ ತಜ್ಞರಿಂದ ಯುವಜನರಿಗೆ ಸಮಾಲೋಚನೆ ನಡೆಸಬೇಕು. ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಮಾಡಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪರಿಷತ್ ನಗರ ಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು, ಶಾಂತಕುಮಾರ, ಅಜೀತ್ ರಾಜಕುಮಾರ, ಚನ್ನಬಸವ, ಶ್ರೀನಿವಾಸ, ದೇವರಾಜ, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net