ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ನಿಲ್ಲಲಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಹೇಳಿಕೆ

26-klr-5
Published on

ಕೋಲಾರ: ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ವಿವಿಧ ಕಾರ್ವಿುಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಗರದ ತಹಸೀಲ್ದಾರ್ ಕಚೇರಿ ಎದುರು ಸಿಐಟಿಯು ಗುರುವಾರ ಪ್ರತಿಭಟನೆ ನಡೆಸಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ರೈತರ, ಕಾರ್ವಿುಕರ, ಬಡವರ ವಿರೋಧಿ ನೀತಿ ಅನುಸರಿಸುತ್ತಾ ಬಂಡವಾಳಶಾಹಿಗಳ ಹಾಗೂ ಕಾರ್ಪೆರೇಟ್ ಸಂಸ್ಥೆಗಳ ಪರ ನೀತಿಗಳನ್ನು ಜಾರಿ ಮಾಡುತ್ತಿದೆ. ಇದರಿಂದ ಸಾಮಾನ್ಯ ವ್ಯಕ್ತಿಯೂ ಗುಲಾಮಗಿರಿಯಲ್ಲಿ ಜೀವನ ನಡೆಸಬೇಕಾದ ಸ್ಥಿತಿ ನಿರ್ವಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ವಿುಕರ ವಿರೋಧಿಯಾಗಿ ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ವಿುಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು, ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್, ಬೆಮೆಲ್ ಸೇರಿ ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ನಿಲ್ಲಬೇಕು ಎಂದರು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಮಾಸಿಕ 7,500 ರೂ ನೆರವನ್ನೂ ಆರು ತಿಂಗಳ ಕಾಲ ನೀಡಬೇಕು. ಎಲ್ಲ ಕುಟುಂಬಗಳ ಪ್ರತಿ ಸದಸ್ಯರಿಗೆ ಮಾಸಿಕ ತಲಾ 10 ಕೆ.ಜಿ. ಆಹಾರ ಪದಾರ್ಥ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕೇಳುವ ಎಲ್ಲರಿಗೂ ನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಬೇಕು. ಕೂಲಿಯನ್ನು 600 ರೂಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಮತ್ತು ಸಾರ್ವಜನಿಕ ರಂಗದ ಘಟಕಗಳ ನೌಕರರ ನಿವೃತ್ತಿಯ ಸುತ್ತೋಲೆ ಹಿಂತೆಗೆದುಕೊಳ್ಳಬೇಕು. ಕಾರ್ವಿುಕರಿಗೆ ಪಿಂಚಣಿ ಒದಗಿಸಬೇಕು. ಎನ್​ಪಿಎಸ್ ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕು. ಸಮಾನ ಕನಿಷ್ಠ ವೇತನ 21,000 ರೂ. ನಿಗದಿ ಮಾಡಬೇಕು, ಅಸಂಘಟಿತ ಕಾರ್ವಿುಕರಿಗೆ ಭವಿಷ್ಯ ನಿಧಿಗೆ ಶಾಸನ ರೂಪಿಸಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

26-ಕೆಎಲ್​ಆರ್-5

ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿಗಳ ವಿರುದ್ಧ ಕೋಲಾರ ತಾಲೂಕು ಕಚೇರಿ ಎದುರು ಸಿಐಟಿಯು ಮುಖಂಡರು ಪ್ರತಿಭಟನೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮುಖಂಡರಾದ ಎಂ.ಭೀಮರಾಜ್, ಎಚ್.ಬಿ.ಕೃಷ್ಣಪ್ಪ, ಆಶಾ, ಕಲಾದೇವಿ, ಪ್ರದೀಪ್ ಕುಮಾರ್, ಮಂಜುಳಾ, ಉಮಾ, ನಾಗರತ್ನಮ್ಮ, ಜಯಮ್ಮ, ಮುನಿರಾಜು, ಹರೀಶ್​ವುತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net