ಪ್ಲಾಸ್ಟಿಕ್ ಬಳಕೆ ತಡೆಯಲು ಮುಂದಾಗಿ

24.npk-1
Published on

ನಾಪೋಕ್ಲು : ಸಮೀಪದ ಮೂರ್ನಾಡು ಮಾರುತಿ ಸಂಯುಕ್ತ ಪೌಢಶಾಲೆ ಮತ್ತು ಪದವಿ ಪೂರ್ವಕಾಲೇಜಿನ ವತಿಯಿಂದ ಶುಕ್ರವಾರ ಸೈಕಲ್ ಜಾಥಾ ಮೂಲಕ ವಿದ್ಯಾರ್ಥಿಗಳು ಪರಿಸರದ ಅರಿವು ಮೂಡಿಸಿದರು.

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ-ಪರಿಸರ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿರಾಜಪೇಟೆಯ ಪ್ರಗತಿ ಶಾಲೆಯವರೆಗೆ ಸೈಕಲ್ ಜಾಥಾ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಮಾತನಾಡಿದ ಕ್ಲೀನ್ ಕೂರ್ಗ ಸಂಘಟನೆ ಸಂಚಾಲಕ ಬಡುವಂಡ ಅರುಣ್ ಅಪ್ಪಚ್ಚು, ಜಿಲ್ಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು. ಹಸಿರು ಜಿಲ್ಲೆಯಾಗಿ ಕೊಡಗು ಮಾರ್ಪಾಡಾಗಲು ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಅಥವಾ ಪೇಪರ್ ಚೀಲ ಬಳಕೆಗೆ ಮುಂದಾಗಬೇಕು ಎಂದರು. ಸ್ವಚ್ಛ ಪರಿಸರ ನಮ್ಮದಾಗಬೇಕು ಎಂದರೆ ಮನೆ ಕಸವನ್ನು ಸಮಗ್ರವಾಗಿ ಬೇರ್ಪಡಿಸಬೇಕು. ನಿಗದಿತ ಜಾಗ ಅಥವಾ ವಾಹನದಲ್ಲೇ ಕಸ ವಿಲೇವಾರಿ ಮಾಡಬೇಕು. ವಿದ್ಯಾರ್ಥಿ ದಿಸೆಯಿಂ ದಲೇ ಸಾಮಾಜಿಕ ಅರಿವು ಮತ್ತು ಜಾಗೃತಿ ಮೂಡಬೇಕು ಎಂದರು. ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ದಮಯಂತಿ, ಕ್ಲೀನ್‌ಕೂರ್ಗ್ ಮೂರ್ನಾಡು ಶಾಖೆೆ ಸದಸ್ಯರು, ಮಾರುತಿ ವಿದ್ಯಾಸಂಸ್ಥೆ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net