

ಗೊಳಸಂಗಿ: ನೇಹಾ ಹಿರೇಮಠ ಎಂಬ ಮುಗ್ದ ಮಗುವಿನ ಬದುಕನ್ನೇ ಭಸ್ಮ ಮಾಡಿದ ಕಿರಾತಕನನ್ನು ಸಾರ್ವಜನಿಕವಾಗಿ ಇನ್ನಿಲ್ಲವೆನ್ನುವಂಥ ಕಠಿಣ ಶಿೆ ಕೊಡಿ. ಭವಿಷ್ಯದಲ್ಲಿ ಇಂಥ ಹೀನ ಕೃತ್ಯಕ್ಕೆ ಅದಾವ ಕಿಡಿಗೇಡಿಯೂ ಕೈಹಾಕದಂತೆ ತಾರ್ಕಿಕ ನ್ಯಾಯ ದೊರಕಿಸಿ ಕೊಡಿ ಎಂದು ಮುತ್ತಗಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ವೀರ ರುದ್ರಮುನಿ ಶಿವಾಚಾರ್ಯರು ರಾಜಕೀಯ ಪಗಳ ನಾಯಕರಿಗೆ ಹೇಳಿದರು.
ಹುಬ್ಬಳ್ಳಿಯಲ್ಲಿ ಅನ್ನ ಕೋಮಿನ ಯುವಕನೋರ್ವನಿಂದ ಹತ್ಯೇಗಿಡಾದ ನೇಹಾ ಹಿರೇಮಠ ಕುರಿತು ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಶ್ರೀಗಳು, ರಾಜಕೀಯ ಪಗಳು ಒಬ್ಬರಿಗೊಬ್ಬರು ನಾನೂ ಕಳ್ಳ, ನೀನೂ ಕಳ್ಳ ಎಂದು ಕೆಸರೆರಚಾಟ ಮಾಡುತ್ತ ಕುಳಿತರೆ ಹತ್ಯೆಯಾದ ಕಂದಮ್ಮ ನೇಹಾಳಿಗೆ ನ್ಯಾಯ ಸಿಗುವುದಿಲ್ಲ. ಆಕೆಯ ಹೆತ್ತೊಡಲಿನಲ್ಲಿ ಹೊತ್ತಿ ಉರಿಯುತ್ತಿರುವ ಜ್ವಾಲಾಗ್ನಿ ತಣ್ಣಗಾಗದು ಎಂದರು.
ಬಾಳಿ ಬೆಳಗಬೇಕಿದ್ದ ಪ್ರತಿಭಾವಂತ ಕುಸುಮ ನೇಹಾ. ಅರಳುವ ಮುನ್ನವೇ ಕಿರಾತಕನೋರ್ವನ ಕುಕೃತ್ಯಕ್ಕೆ ಬಲಿಯಾಗಿರುವುದಕ್ಕೆ ಖಂಡಿಸಬೇಕಿದ್ದ ರಾಜ್ಯ ಸರ್ಕಾರ ಸಮರ್ಥನೆಗಿಳಿದಿರುವುದು ನಾಚಿಕೆಗೇಡಿತನದ ಸಂಗತಿ.
ಕೊಲೆಗಡುಕ ಯಾಜ್ನಿಗೆ ಉಗ್ರ ಶಿಕ್ಷೆಯಾಗಲಿ ಎಂದು ಸ್ವತ: ಆತನ ತಾಯಿ ಮುಮ್ತಾಜ್ ಅವರೇ ಹೇಳುತ್ತಿರುವಾಗ ಸಿಎಂ ಸಿದ್ದರಾಮಯ್ಯ ಅದು ಅವರು, ವೈಯಕ್ತಿಕ ವಿಚಾರವೆಂದು ಹೇಳಿದರೆ, ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗೃಹಮಂತ್ರಿ ಜಿ.ಪರಮೇಶ್ವರ ತನಿಖೆಯನ್ನು ಕೈಗೆತ್ತಿಕೊಳ್ಳುವ ಮುನ್ನವೇ ಆಳುವ ದೊರೆಗಳು ಅಡ್ಡ ದಾರಿ ಹಿಡಿದು ಮಾತನಾಡಿದರೆ ರಾಜ್ಯದ ಜನತೆ ನಿಮ್ಮ ಮೇಲೆ ಯಾವ ಭರವಸೆಯನ್ನಿಡಬೇಕು ಎಂದರು.
ಕೂಡಲೇ ಧರ್ಮಾಂಧ ಯಾಜ್ನಿಗೆ ಸಾರ್ವಜನಿಕವಾಗಿ ಎನ್ಕೌಂಟರ್ ಮಾಡಿ ಕೇವಲ ಹೆತ್ತವರಿಗಷ್ಟೇ ಅಲ್ಲ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು. ಇಲ್ಲದೆ ಹೋದರೆ ಸರ್ಕಾರದ ಮೇಲೆ ಯಾವ ನಂಬಿಕೆಯೂ ಜನರಿಗೆ ಉಳಿಯದು ಎಂದು ಅವರು ಕಿಡಿ ಕಾರಿದರು.