ಅಕ್ರಮ ಮರಳುಗಾರಿಕೆ ಸಂಪೂರ್ಣ ನಿಲ್ಲಲಿ

PH 05
Published on

ಅಫಜಲಪುರ: ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಗೆ ಬ್ರೇಕ್ ಹಾಕಬೇಕು. ಮರಳುಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಕಂದಾಯ ಹಾಗೂ ಗಣಿ, ಭೂ ವಿಜ್ಞಾನ ಇಲಾಖೆಗೆ ಪೊಲೀಸರು ಸಾಥ್ ನೀಡಬೇಕು ಎಂದು ಸಹಾಯಕ ಆಯುಕ್ತೆ ಮಮತಾ ಕುಮಾರಿ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ರಮ ಮರಳು ಸಾಗಣೆ ಸಂಪೂರ್ಣ ನಿಯಂತ್ರಿಸಲು ಎಲ್ಲರೂ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಮಣ್ಣೂರ ಹಾಗೂ ಸೊನ್ನ ಗ್ರಾಮಗಳಲ್ಲಿ ನಿರಂತರ ಅಕ್ರಮ ಮರಳು ಸಾಗಾಣೆ ನಡೆಯುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ನಿರ್ಲಕ್ಷÈ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಕಂದಾಯ ಇಲಾಖೆ ಜಪ್ತಿ ಮಾಡಿರುವ ಮರಳನ್ನು ಪರವಾನಿಗೆ ಕೊಟ್ಟು ಮಾರಾಟ ಮಾಡಿದರೆ ಸರ್ಕಾರಕ್ಕಾದರೂ ಲಾಭವಾಗುತ್ತದೆ. ಕೆಲವು ಕಡೆ ನಾವು ಜಪ್ತಿ ಮಾಡಿದ ಮರಳು ರಾತ್ರೋರಾತ್ರಿ ಮಾಯವಾಗುತ್ತಿದೆ. ನೀರಿಲ್ಲದೆ ಭೀಮಾ ನದಿ ಬರಿದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಸಮಿತಿಯಲ್ಲಿರುವ ಎಲ್ಲ ಇಲಾಖೆಯವರು ಮುಂಜಾಗ್ರತೆ ವಹಿಸಿ, ಮರಳು ಸಾಗಣೆ ತಡೆಗಟ್ಟಬೇಕಿದೆ ಎಂದರು.

ಲೋಕೋಪಯೋಗಿ ಇಲಾಖೆ ಎಇಇ ಲಕ್ಷಿö್ಮÃಕಾಂತ ಬಿರಾದಾರ ಮಾತನಾಡಿ, ಇಲಾಖೆಯಿಂದ 1240 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದ್ದು, ಶೀಘ್ರದ¯್ಲೆÃ ಪರವಾನಿಗೆ ಕೊಟ್ಟು ಮಾರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅಧಿಕಾರಿಗಳಾದ ಶಾಂತಪ್ಪ ಜಾಧವ್, ಬಸವರಾಜ ಸಿಂಪಿ, ಮಡಿವಾಳಪ್ಪ ಬಾಗೋಡಿ, ಘಾಳಪ್ಪ ಕಂಬಾರ, ಶ್ರೀದೇವಿ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net