ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ

29 ಎಸ್ಕೆಪಿ 2
ಕರ್ನಾಟಕ ಬಂದ್ ಬೆಂಬಲಿಸಿ ಶಿಕಾರಿಪುರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸಿದರು. ಶಿವಯ್ಯ ಶಾಸ್ತ್ರಿ, ಮಾಲತೇಶ್, ಇಮ್ರಾನ್, ಮುಕ್ರಮ್ ಇತರರಿದ್ದರು.
Published on

ಶಿಕಾರಿಪುರ: ಕಾವೇರಿ ಹೋರಾಟಕ್ಕೆ ನೈತಿಕ ಮತ್ತು ಬಾಹ್ಯ ಬೆಂಬಲ ಸೂಚಿಸಿ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಪ್ರಧಾನಿ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಶಿವಯ್ಯ ಶಾಸ್ತ್ರಿ ಮಾತನಾಡಿ, ಕಾವೇರಿ ಯಾವುದೋ ಒಂದು ಭಾಗಕ್ಕೆ ಸೀಮಿತವಲ್ಲ. ಅದು ಕನ್ನಡ ನಾಡಿನ ಜೀವನದಿ. ಕಾವೇರಿ ಹೋರಾಟಕ್ಕೆ ನಮ್ಮ ನೈತಿಕ ಮತ್ತು ಬಾಹ್ಯ ಬೆಂಬಲವಿದೆ. ಕಾವೇರಿ ಕೊಳ್ಳದಲ್ಲಿ ಕುಡಿಯುವ ನೀರಿಗಾಗಿ ಹೋರಾಟ ನಡೆದಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ರೈತರ ಸಂಕಷ್ಟ ಕ್ಕೆ ಸ್ಪಂದಿಸಬೇಕು. ರೈತ ನಕ್ಕರೆ ಮಾತ್ರ ನಾಡು ಸಮೃದ್ಧ ಎಂದರು.
ಕಾರ್ಯಾಧ್ಯಕ್ಷ ಮಾಲತೇಶ್, ಕಾರ್ಯದರ್ಶಿ ಇಮ್ರಾನ್, ನಗರಾಧ್ಯಕ್ಷ ಮುಕ್ರಮ್, ಪ್ರಮುಖರಾದ ಪ್ರಭುಸ್ವಾಮಿ ಆರಾಧ್ಯಮಠ್, ಶಿವಕುಮಾರ್ ಶಾಸ್ತ್ರಿ ಕವಲಿ, ನವೀನ್, ನರಸಿಂಹ, ಹಿರಣ್ಣಯ್ಯ, ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net