ಪ್ರಧಾನಿಯನ್ನು ಟೀಕಿಸುವುದು ನಿಲ್ಲಿಸಲಿ

mahesh tenginkai
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇವಲ ನೀರು ಕುಡಿದು ಹಲವು ದಿನಗಳ ಕಾಲ ಯಾರೂ ಬೇಕಾದರೂ ಉಪವಾಸ ಮಾಡಬಹುದು. ಜೈನ್ ಮುನಿಗಳಿಂದ ಕಾಂಗ್ರೆಸ್ ಇದನ್ನು ಅರಿತುಕೊಳ್ಳಲಿ. ಉಪವಾಸ, ಇನ್ನಿತರ ವಿಷಯಗಳಲ್ಲಿ ಪ್ರಧಾನಿಯವರನ್ನು ಟೀಕಿಸುವುದನ್ನು ಕಾಂಗ್ರೆಸ್ ಇನ್ನಾದರೂ ನಿಲ್ಲಿಸಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲದರಲ್ಲೂ ರಾಜಕಾರಣ ಸೇರಿಸುವ ಕೆಲಸ ಮಾಡಬಾರದು. ನವರಾತ್ರಿ-ದಸರಾ ಸಂದರ್ಭದಲ್ಲಿ ನಾನು 9 ದಿನ ಉಪವಾಸ ಮಾಡಿದ್ದೇನೆ. ಕಾಂಗ್ರೆಸ್ಸಿಗರು ಎಂದೂ ಉಪವಾಸ ಮಾಡುವುದಿಲ್ಲ. ಅವರಿಂದ ಅಲ್ಪಸಂಖ್ಯಾತರ ತುಷ್ಠೀಕರಣ ಹದ್ದು ಮೀರಿ ಹೋಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net