ಸುಳ್ಳುಗಳ ಸರಮಾಲೆ ಮನ್ ಕೀ ಬಾತ್ ಪ್ರಸಾರ ನಿಲ್ಲಿಸಿ

22-10-Shiva-5
ಪ್ರಧಾನಿ ಮೋದಿಯ ಮನ್ ಕೀ ಬಾತ್ ಪ್ರಸಾರ ನಿಲ್ಲಿಸುವಂತೆ ಒತ್ತಾಯಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್‌ನಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ತಾಲೂಕು ಕಾರ್ಯದರ್ಶಿ ಆರ್.ಹುಚ್ಚರೆಡ್ಡಿ, ಪದಾಕಾರಿಗಳಾದ ಅಜೀಜ್ ಜಾಗೀರದಾರ, ಮಲ್ಲಯ್ಯ ಕಟ್ಟಿಮನಿ, ಆದೇಶ ನಗನೂರು, ಜಿ.ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ಹನ್ೀ ಅಬಕಾರಿ, ಲಕ್ಷ್ಮಣ, ನಾರಾಯಣ ಇದ್ದರು.
Published on

ರಾಯಚೂರು: ಸುಳ್ಳುಗಳನ್ನು ಹೇಳುವ ಪ್ರಧಾನಿ ನರೇಂದ್ರ ಮೋದಿಯ ಮನ್ ಕೀ ಬಾತ್ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ರೇಡಿಯೋ ಒಡೆದು ಹಾಕುವ ಮೂಲಕ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಕಳೆದ 9 ವರ್ಷಗಳಿಂದ ಮೋದಿ ಮನ್ ಕೀ ಬಾತ್ ಹೆಸರಿನಲ್ಲಿ ಜನರಿಗೆ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಮೋದಿ ಜನರ ಮನದ ಮಾತುಗಳನ್ನು ಕೇಳುತ್ತಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಲು ಪ್ರಯತ್ನಿಸುತ್ತಿಲ್ಲ.
ದೇಶದ ನಾಗರಿಕರ ಸಮಸ್ಯೆ ಆಲಿಸದೇ ಅಂತಾರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆ ಕಣ್ಣೀರು ಸುರಿಸುತ್ತಿದ್ದಾರೆ. ದೇಶದ ನಾಗರಿಕರ ಜೀವಕ್ಕಿಂತ ಪರ ದೇಶ ಚಿಂತೆ ಪ್ರಧಾನಿ ಹೆಚ್ಚಾಗಿದೆ. ಜನರ ಖಾತೆಗೆ 15 ಲಕ್ಷ ರು. ಹಾಕುತ್ತೇನೆ ಎಂದು ಹೇಳಿ ಒಂದು ರೂಪಾಯಿ ಕೂಡಾ ಹಾಕಲಿಲ್ಲ.
ಆರ್‌ಎಸ್‌ಎಸ್ ಅಣತಿಯಂತೆ ಸರ್ಕಾರ ನಡೆಯುತ್ತಿದ್ದು, ದೇಶದ ಅಲ್ಪ ಸಂಖ್ಯತರ, ದಲಿತರ ರಕ್ಷಣೆ ಮಾಡುತ್ತಿಲ್ಲ. ಪ್ರಸಾರ ಭಾರತಿ ಮನ್ ಕೀ ಬಾತ್ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ತಾಲೂಕು ಕಾರ್ಯದರ್ಶಿ ಆರ್.ಹುಚ್ಚರೆಡ್ಡಿ, ಪದಾಕಾರಿಗಳಾದ ಅಜೀಜ್ ಜಾಗೀರದಾರ, ಮಲ್ಲಯ್ಯ ಕಟ್ಟಿಮನಿ, ಆದೇಶ ನಗನೂರು, ಜಿ.ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ಹನ್ೀ ಅಬಕಾರಿ, ಲಕ್ಷ್ಮಣ, ನಾರಾಯಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net