ಬ್ಲಾಕ್​ ಮೇಲ್​ ಪತ್ರಕರ್ತರಿಗೆ ಕಡಿವಾಣ ಹಾಕಿ: ಪತ್ರಿಕಾ ದಿನಾಚರಣೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ

17 Budikote 3 patrakartara dinacharane
ಕಾಮಸಮುದ್ರದ ಕೆ.ಸಿ.ಆರ್​ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ದಿನಾಚರಣೆಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಗೋಪಿನಾಥ್​ ಮತ್ತಿತರರಿದ್ದರು.
Published on

ಬಂಗಾರಪೇಟೆ ಗ್ರಾಮಾಂತರ: ಬ್ಲಾಕ್​ ಮೇಲ್​ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.


ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದ ಕೆ.ಸಿ.ಆರ್​ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ಡಿ.ವಿ ಗುಂಡಪ್ಪ ಅವರು 1932ರಲ್ಲಿ ಹುಟ್ಟು ಹಾಕಿದ ಪತ್ರಕರ್ತರ ಸಂದಲ್ಲಿ ರಾಜ್ಯದಿಂದ ಹೋಬಳಿ ಮಟ್ಟದವರೆಗೂ ಸದಸ್ಯರಿದ್ದಾರೆ. ಹತ್ತು ಜನರಿಂದ ಆರಂಭವಾದ ಸಂಘ 90 ವಸಂತಗಳನ್ನು ಪೂರೈಸಿ ನಾಡಿನಾದ್ಯಂತ ಎಂಟು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿ ಇಡೀ ಭಾರತದಲ್ಲಿ ಅತೀ ದೊಡ್ಡದಾದ ಸಂವನ್ನು ಕರ್ನಾಟಕದಲ್ಲಿ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.


ಪತ್ರಕರ್ತರ ವೃತ್ತಿಯನ್ನು ಬಹಳ ಲುವಾಗಿ ಪರಿಗಣಿಸಲಾಗುವುದಿಲ್ಲ. ಪರಿಪೂರ್ಣ ಪತ್ರಕರ್ತನಾಗಲು ಒಂದರಿಂದ ಎರಡು ವರ್ಷ ಬೇಕಾಗುತ್ತೆ. ಆದರೆ ದುರಂತವೆಂದರೆ ಇಂದಿನ ದಿನಗಳಲ್ಲಿ 24 ಗಂಟೆಗಳಲ್ಲಿ ಪತ್ರಕರ್ತನಾಗುತ್ತಾನೆ. ಐಡಿ ಕಾರ್ಡ್​ಗಳಿಗಾಗಿ ಪತ್ರಕರ್ತರ ಸಂಘಗಳು ಆರಂಭವಾಗುತ್ತಿವೆ. ಯೂಟ್ಯೂಬ್​ ಚಾನಲ್​ ಆರಂಭಿಸಿ ಒಂದು ಲೋಗೋ ಇಟ್ಟುಕೊಂಡರೆ ಬೆಳಗಾಗೋದರಲ್ಲಿ ತನಗೆ ತಾನೇ ಪತ್ರಕರ್ತನಾಗುತ್ತಾನೆ. ದಂಧೆಗಾಗಿ ವೃತ್ತಿ ಆರಂಭಿಸುವವರನ್ನು ಸಂಘದಿಂದ ದೂರ ಇಡಬೇಕು ಎಂದರು.

ಜಿಲ್ಲಾಧ್ಯಕ್ಷ ಗೋಪಿನಾಥ್​ ಮಾತನಾಡಿ, ಪತ್ರಕರ್ತ ಮನೆಗೆ ಮಾರಿ ಪರರಿಗೆ ಉಪಕಾರಿಯಾಗಿದ್ದಾರೆ. ಕರೊನಾ ಮಹಾಮಾರಿ ಜಗತ್ತನ್ನು ಕಾಡಿದಾಗ ಸುಮಾರು 100 ಪತ್ರಕರ್ತರಿಗೆ ಕರೊನಾ ಸಂಕಷ್ಟ ತಂದೊಡ್ಡಿತು. ಅಂತಹ ಸಂದರ್ಭದಲ್ಲಿ ಸಂಘವು ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡಿತು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸಂಘ ಅಥವಾ ಸಂಘಟನೆಗಳನ್ನು ಆರಂಭಿಸಬಹುದು ಆದರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇರುವ ಶಕ್ತಿಯಿಂದ ಸರ್ಕಾರ ಸಂದ ಮನವಿಗೆ ಸ್ಪಂದಿಸುತ್ತಿದೆ. ಸಂಘದಲ್ಲಿ ಭಿನ್ನಾಭಿಪ್ರಾಯ ವೈಮನಸ್ಸು ಇದ್ದರೂ ಸಹ ಸಹಮತಕ್ಕೆ ಬಂದರೆ ಮಾತ್ರ ಸಂಟನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯ. ಸಂಘದಿಂದ ಹೊರ ಹೋದವರು ಇಂದು ಪುನಃ ಬರುತ್ತೇವೆ ಎಂದು ಬರುತ್ತಿದ್ದಾರೆ. ನಾನಿಲ್ಲದೆ ಸಂಘದಿಂದ ಇಲ್ಲ ಅನ್ನೋ ಮನೋಭಾವ ಬಿಟ್ಟು ಸಂಘದಿಂದ ನಾನು ಎಂಬುದನ್ನು ಬೆಳೆಸಿಕೊಳ್ಳಬೇಕು ಎಂದರು.


ಪಟ್ಟಣದಲ್ಲಿ ಸಂಘಕ್ಕೆ ಕಟ್ಟಡವಿಲ್ಲದ ಕಾರಣ ನೂತನ ತಾಲೂಕು ಅಧ್ಯಕ್ಷ ಎಂ.ಸಿ.ಮಂಜುನಾಥ ಮತ್ತು ನಿರ್ಗಮಿತ ಅಧ್ಯಕ್ಷ ಚಂದ್ರಾರೆಡ್ಡಿ ಒಟ್ಟಾಗಿ ಬಂಗಾರಪೇಟೆಯಲ್ಲಿ ನೂತನ ಕಟ್ಟಡ ನಿರ್ಮಿಸಬೇಕು ಎಂದರು.


ಪತ್ರಕರ್ತರ ಕಲ್ಯಾಣ ನಿಧಿಗೆ ಹಣವನ್ನು ಸಂಗ್ರಹಣೆ ಮಾಡಲಾಗುತ್ತಿದ್ದು, ಈಗಾಗಾಲೇ 80 ಸಾವಿರ ರೂ. ಸಂಗ್ರಹ ಆಗಿದ್ದು, ಒಂದು ಕೋಟಿ ರೂ. ಹಣ ಸಂಗ್ರಹಣೆ ಆಗುವವರೆಗೂ ಯಾರೂ ಸಹ ವಿಶ್ರಮಿಸಬಾರದು ಎಂದರು.


ಸಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್​ ಗಣೇಶ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್​.ಕೆ ಚಂದ್ರಶೇಖರ್​, ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಖಜಾಂಚಿ ಸುರೇಶ್​, ತಾಲೂಕು ಅಧ್ಯಕ್ಷ ಎಂ.ಸಿ.ಮಂಜುನಾಥ, ನಿಕಟಪೂರ್ವ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕನ್ನಡ ಸಂದ ಅಧ್ಯಕ್ಷ ಪಲ್ಲವಿ ಮಣಿ, ತಾಲೂಕು ಉಪಾಧ್ಯಕ್ಷ ಪುನಿತ್​, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್​, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರಾಮೂರ್ತಿ, ಎಚ್​.ಎಲ್​ ನಾಗರಾಜ ಮತ್ತಿತರರಿದ್ದರು.

ಒಳ್ಳೆ ಪತ್ರಕರ್ತರಾಗಿ: ದಾರಿಯಲ್ಲಿ ಪತ್ರಕರ್ತ ಸಾಗುತ್ತಿದ್ದಾನೆ ಎಂದಾಗ ಅವನ ಬೆನ್ನ ಹಿಂದೆ ಒಳ್ಳೆ ಪತ್ರಕರ್ತ ಎಂದು ಮಾತನಾಡಿದರೆ ಅದು ಪದ್ಮಶ್ರೀ ಪ್ರಶಸ್ತಿ ಪಡೆದಂತೆ. ನೊಂದವರ, ಅಶಕ್ತರ ಹಾಗೂ ದೀನದಲಿತರ ಕಣ್ಣಿರು ಓರೆಸಲು ಸಾಧ್ಯವಿಲ್ಲವೋ. ಯಾರಿಗೆ ಸತ್ಯವನ್ನು ಹೇಳಲಿಕ್ಕೆ ಆಗುವುದಿಲ್ಲವೋ, ಅಂತವರು ಪತ್ರಕರ್ತರ ವೃತ್ತಿಯಲ್ಲಿ ಸಾಗಲು ಅನರ್ಹರು ಎಂದು ಶಿವಾನಂದ ತಗಡೂರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net