ದುರಾಸೆ ಬಿಡಿ ಪರಿಸರ ಉಳಿಸಿ

ENVIRONMENT
Published on

ರೋಣ: ನಿರಕ್ಷರಿ ಮಾನವ ಭೂಮಿಯನ್ನು ಉಳಿಸುತ್ತಾ ಬದುಕು ಸಾಗಿಸಿದರೆ ಇಂದಿನ ಸಾಕ್ಷರ ಮಾನವ ಭೂಮಿಯನ್ನು ಅಳಿಸುತ್ತಾ ಬದುಕುತ್ತಿದ್ದಾನೆ.

ಮನುಷ್ಯನ ಮನಸಿನಲ್ಲಿ ನಿಸರ್ಗದ ಉಳಿವಿನ ಜಾಗ್ರತೆ ಮೂಡಿಸಿದರೆ ಮಾತ್ರ ಪರಿಸರದ ಉಳಿವು ಸಾಧ್ಯ. ಯುವಕರು ಪರಿಸರದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.

ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳಿಂದ ಮಕ್ಕಳು ದೂರವಿರಬೇಕು ಎಂದು ಮುಖ್ಯೋಪಾಧ್ಯಾಯ ಪಿ.ಎಚ್. ವಾಲ್ಮೀಕಿ ಹೇಳಿದರು.
ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಮಾಹಿತಿ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಲಯ ಮೇಲ್ವಿಚಾರಕ ರಾಘವೇಂದ್ರ ಗುಡಿ, ಕೃಷಿ ಮೇಲ್ವಿಚಾರಕ ಚನ್ನಯ್ಯ ಕೆ. ಎಚ್, ಎಸ್‌ಡಿಎಂಸಿ ಅಧ್ಯಕ್ಷ ಯೋಗಾನಂದ, ಸೇವಾಪ್ರತಿನಿಧಿ ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net