

ಹೆಬ್ರಿ: ಹೆಬ್ರಿ ಪಿಎಸ್‌ಐ ಮಹೇಶ್ ಟಿಎಂ ನೇತೃತ್ವದಲ್ಲಿ ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಸಂಜೆ ಎಲ್‌ಇಡಿ ಬಳಸುವ ವಾಹನಗಳನ್ನು ತಡೆದು ದಂಡ ವಿಧಿಸಲಾಯಿತು. ಪಿಎಸ್‌ಈ ಮಹೇಶ್ ಟಿ.ಎಂ. ವಿಜಯವಾಣಿಯೊಂದಿಗೆ ಮಾತನಾಡಿ, ಕಳೆದ ಕೆಲವು ದಿನಗಳಿಂದ ಕಾರ್ಯಚರಣೆ ನಡೆಯುತ್ತಿದೆ. ಬಹಳಷ್ಟು ಮಂದಿ ನಮಗೆ ಸಹಕಾರ ನೀಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ವಾಹನದಲ್ಲಿ ಹೆಚ್ಚುವರಿ ಆಗಿ ಎಲ್‌ಇಡಿ ಬಲ್ಬ್ ಬಳಸಿದಾಗ ಮುಂದೆ ಬರುವ ಇತರರಿಗೆ ಗೋಚರಿಸುವುದಿಲ್ಲ. ಇದರಿಂದ ಅನೇಕ ಅಪಘಾತ ನಡೆಯುತ್ತದೆ. ಬಹಳಷ್ಟು ಖಾಸಗಿ ಬಸ್ ಮಾಲೀಕರು ನಮ್ಮ ಮಾತಿಗೆ ಒಪ್ಪಿ ಲೈಟ್ ತೆರವುಗೊಳಿಸಿದ್ದಾರೆ. ಸವಾರರು ಕಾನೂನಿಗೆ ಗೌರವ ನೀಡಿ, ಪೊಲೀಸರೊಂದಿಗೆ ಸಹಕರಿಸಿ ಎಂದರು.