

ಧಾರವಾಡ: ನಗರದ ಡಿಸಿ ಕಾಂಪೌ0ಡ್ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಗೊಳ ಮತ್ತು ಕ್ರೀಡಾ ಸಂಕೀರ್ಣಕ್ಕೆ ಕಲ್ಲೆಸಿದಿರುವ ಕಿಡಿಗೇಡಿಗಳು ಗ್ಲಾಸ್ ಒಡೆದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮತ್ತು ನಿವಾಸಕ್ಕೆ ಹೊಂದಿಕೊ0ಡೇ ಈಜುಗೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ಈಜುಗೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಸುಸಜ್ಜಿತ ಕ್ರೀಡಾ ಸಂಕೀರ್ಣದ ಹೊರಭಾಗ ಸಂಪೂರ್ಣ ಗ್ಲಾಸ್‌ನಿಂದ ಆವೃತವಾಗಿದ್ದು, ಸುಂದರವಾಗಿ ನಿರ್ಮಾಣಗೊಂಡಿದೆ. ಗುರುವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲೆಸೆದು ಗ್ಲಾಸ್ ಒಡೆದಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.