

ನ್ಯಾಮತಿ: ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶ, ಕಳಸಾರೋಹಣ ಮತ್ತು ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಭಾನುವಾರ ನೆರವೇರಿತು.
ಶನಿವಾರ ಮಹಾ ಸಂಕಲ್ಪದೊಂದಿಗೆ ಗಣಪತಿ ಸ್ವಸ್ತಿ ಪುಣ್ಯಾಹ ನಾಂದಿ, ಪಂಚ ಕಳಸ, ಮಹಾರುದ್ರ. ಮಹಾಗೌರಿ, ವಾಸ್ತು ಹೋಮ, ಲಕ್ಷ್ಮಿ ನಾರಾಯಣ ನವದುರ್ಗ, ನವಗ್ರಹ, ಮಹಾ ಮೃತ್ಯುಂಜಯ, ಅಷ್ಟ ದಿಕ್ಪಾಲಕರ ಕಳಸ ಸ್ಥಾಪನೆ, ಅಷ್ಟ ಬಂಧ, ನ್ಯಾಸಧಿ ಸಹಿತ ಮಹಾ ರುದ್ರಾಭಿಷೇಕ, ಗಣಹೋಮ, ರುದ್ರಹೋಮ, ವಾಸ್ತಹೋಮ, ಕಾಳಹೋಮ, ನವಗ್ರಹ ಹೋಮಗಳ ಪೂಜಾ ಕೈಕಂರ್ಯಗಳು ಕೋ-ಹಳ್ಳಿ ಮಠದ ಎನ್.ಕೆ.ವಿಶ್ವಾರಾಧ್ಯಶಾಸ್ತ್ರಿ ಅವರ ಪೌರೋಹಿತ್ಯದಲ್ಲಿ ನೆರವೇರಿದವು.
ಭಾನುವಾರ ಬೆಳಗ್ಗೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶೀ ಗಂಗಾಳಮ್ಮ ದೇವಿ, ಶ್ರೀ ಪಂಚಮುಖಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ನಂತರ ಮಹಾರುದ್ರಾಭಿಷೇಕ, ಇಷ್ಟಲಿಂಗ ಪೂಜೆ, ಅಷ್ಟೋತ್ತರ, ಮಹಾಮಂಗಲ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾಮಂಗಳಾರತಿ ವಿಜೃಂಭಣೆಯಿಂದ ನಡೆಯಿತು.
ಸುಮಂಗಲಿಯರು ಪೂರ್ಣಕುಂಭದೊಂದಿಗೆ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳನ್ನು ನೂತನ ದೇವಸ್ಥಾನಕ್ಕೆ ಸ್ವಾಗತಿಸಿದರು. ನಂತರ ಶ್ರೀಗಳಿಂದ ನೂತನ ದೇವಾಲಯ ಪ್ರವೇಶ, ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿತು. ದೇವಸ್ಥಾನದಲ್ಲಿ ವಿವಾಹವಾದ ಒಂದು ಜೋಡಿ ನವ ದಂಪತಿಗೆ ಶ್ರೀಗಳು ಆಶೀರ್ವದಿಸಿದರು.
ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಭಕ್ತ ಮಂಡಳಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಾಜದ ಮುಖಂಡರು ಭಾಗವಹಿಸಿದ್ದರು.