ಕಲ್ಲು ತೂರಾಟ: ಮೂವರ ಬಂಧನ

raichur
raichur
Published on

ರಾಯಚೂರು ಹಳೆಯ ದ್ವೇಷ ಹಿನ್ನೆಲೆ 5ನೇ ದಿನದ ಗಣೇಶ ಮೆರವಣಿಗೆ ವೇಳೆ ಮೂವರು ಯುವಕರು ನಗರದ ಗಂಗಾ ನಿವಾಸ ರಸ್ತೆಯಲ್ಲಿ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಶಾಂತ್(22), ಪ್ರವೀಣ್ (20), ಅನಿಲ್(25) ಕಲ್ಲು ತೂರಿದ ಆರೋಪಿಗಳು.

ನಗರದ ಗಂಗಾ ನಿವಾಸ ಹಾಗೂ ಮಂಗಳವಾರಪೇಟೆ ಬಡಾವಣೆಯ ಯುವಕರ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು. ಈ ಗಲಾಟೆಯನ್ನು ಮನದಲ್ಲಿಟ್ಟುಕೊಂಡ ಮೂವರು ಯುವಕರು ಆ.31 ರಂದು 5ನೇ ದಿನದ ಗಣೇಶ ವಿಸರ್ಜನೆ ನಿಮಿತ್ತ ನಗರದ ಗಂಗಾನಿವಾಸ ಮಾರ್ಗ ಮೂಲಕ ಮೆರವಣಿಗೆ ಬಂದಿದ್ದಕ್ಕೆ ಮಳಿಗೆಯೊಂದರ ಟೆರಸ್ ಮೇಲೆ ನಿಂತುಕೊಂಡು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಮಂಗಳವಾರಪೇಟೆಯ ವಿನಯ್ ಕುಮಾರ್(22) ಹಾಗೂ ಗಣೇಶ್ (16) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಕಲ್ಲು ತೂರಿದ ಯುವಕರನ್ನು ಪೊಲೀಸರು ಬಂದಿಸಿದ್ದು, ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಲ್ಲು ತೂರಾಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net