ಶ್ರೀರಾಮನ ಶಿಲಾವಿಗ್ರಹ ಪತ್ತೆ

19 Dwd 6 New
Published on

ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದ ಕೆರೆಯ ದಂಡೆಯಲ್ಲಿ ಶುಕ್ರವಾರ ಶ್ರೀರಾಮನ ಶಿಲಾವಿಗ್ರಹ ಪತ್ತೆಯಾಗಿದೆ. ಗ್ರಾಮದ ಹೊರಭಾಗದಲ್ಲಿರುವ ಕೆರೆಯ ದಂಡೆಯಲ್ಲಿ ಶ್ರೀರಾಮ ವಿಗ್ರಹ ದೊರೆತಿದೆ. ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಪತ್ತೆಯಾದ ಶಿಲಾವಿಗ್ರಹದಲ್ಲಿ ರಾಮ, ಸೀತೆ, ಲಕ್ಷ÷್ಮ್ಮಣ, ಆಂಜನೇಯನನ್ನು ಹೋಲುವ ಕೆತ್ತನೆ ಇದೆ. ಮೇಲ್ಭಾಗದಲ್ಲಿ ಶಿವಪಾರ್ವತಿ ಮತ್ತು ನಂದಿಯ ಕೆತ್ತನೆ ಇದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. ಜ. ೨೨ರಂದು ಗ್ರಾಮದಲ್ಲಿ ಪ್ರತಿಷ್ಠಾಪನೆ ಹಿರಿಯರು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net