ಹೊಟ್ಟೆ ಹಸಿವು, ಬಿಸಿಲಿನಿಂದ ಬಳಲಿ ಮೃತಪಟ್ಟ ವ್ಯಕ್ತಿ

Crime Logo
Published on

ರಾಣೆಬೆನ್ನೂರ: ಹೊಟ್ಟೆ ಹಸಿವು ಹಾಗೂ ಬಿಸಿಲಿನ ತಾಪದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಎಂ.ಜಿ. ರಸ್ತೆಯಲ್ಲಿ ಸೋಮವಾರ ನಡೆದಿದೆ.
ರಟ್ಟಿಹಳ್ಳಿ ತಾಲೂಕಿನ ಮೈದೂರ ಗ್ರಾಮದ ಕರೀಮ್‌ಸಾಬ ಹುಸೇನಸಾಬ ಗುಬ್ಬಿ (50) ಮೃತ ವ್ಯಕ್ತಿ.
ಈತ ಗಾರೆ ಕೆಲಸ ಮಾಡಿಕೊಂಡಿದ್ದ. ಮನೆಯಿಂದ ಬೆಳಗ್ಗೆ ಕೆಲಸಕ್ಕಾಗಿ ಬಂದವನು ಮಧ್ಯಾಹ್ನ ಹೊಟ್ಟೆ ಹಸಿವಿನಿಂದ ಹಾಗೂ ಬಿಸಿಲಿನ ತಾಪದಿಂದ ಎಂ.ಜಿ. ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net