ಒಳ್ಳೆಯ ಕಾರ್ಯ ಮಾಡಿದಾಗ ಹೊಟ್ಟೆ ಉರಿ ಸಹಜ

c t ravi new
ಸಿ.ಟಿ.ರವಿ
Published on

ಕಡೂರು: ಒಳ್ಳೆಯ ಕಾರ್ಯ ಮಾಡಿದಾಗ ಹೊಟ್ಟೆ ಉರಿ ಸಹಜ, ಕಾಂಗ್ರೆಸ್‌ನವರೇ ರಾಮಮಂದಿರ ನಿರ್ಮಾಣ ಮಾಡಿದ್ದರೇ ಮೋದಿ ಇಂದು ಹಿಂದು ಹೃದಯ ಸಾಮ್ರಾಟ್ ಎಂದು ಕರೆಸಿಕೊಳ್ಳುತ್ತಿರಲಿಲ್ಲ. ನೆಹರೂ ಅವರೇ ಹಿಂದು ಹೃದಯ ಸಾಮ್ರಾಟ್ ಆಗಬಹುದಿತ್ತು ಇದರ ಲ ಅವರೇ ಪಡೆದುಕೊಳ್ಳಬಹುದಾಗಿತ್ತು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಕಡೂರಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಿಸಿದ್ದರೆ ಕರಸೇವೆ ಅಗತ್ಯವೂ ಇರುತ್ತಿರಲಿಲ್ಲ. ಕಾಶಿ ಕಾರಿಡಾರ್ ಅವರೇ ಮಾಡಿ ಗಂಗಾರತಿ ಮಾಡಬೇಕಿತ್ತು. ಅನ್ಯಾಯ, ಸುಳ್ಳು, ಮೋಸ ಇದು ಧರ್ಮವಲ್ಲ, ಅದು ಧಾರ್ಮಿಕ ಕಾರ್ಯಕ್ರಮ ಅಲ್ಲ ಎಂದು ಏಕೆ ಅನಿಸಲಿಲ್ಲ. ಇವರಿಗೆ ದೇವರು ಅವಕಾಶ ನೀಡಿದಾಗ ಸತ್ಯ ಎತ್ತಿ ಹಿಡಿಯುವ ಕೆಲಸ ಮಾಡಲಿಲ್ಲ, ಈಗ ಅವರಿಗೆ ಹೊಟ್ಟೆ ಉರಿ ಇದೆ. ಅವರೇ ಮಾಡಿದ್ರೆ ಇತಿಹಾಸದಲ್ಲಿ ಅವರೇ ಅಜರಾಮರರಾಗಿ ಉಳಿಯುತ್ತಿದ್ದರು ಎಂದರು.
ಸಿದ್ದರಾಮಯ್ಯ ತಪ್ಪು ಮಾಡಿದವರಿಗೆ ಬಿಡೋಕ್ ಆಗುತ್ತಾ ಎಂಬ ಮಾತುಗಳಿಗೆ ಹಿಂದೆ ಡಿಜೆ ಹಳ್ಳಿ-ಕೆಜೆ ಹಳ್ಳಿಗೆ ಬೆಂಕಿ ಹಾಕಿದವರ ಬಿಡಿ ಎಂದು ನಿಮ್ಮ ಮಂತ್ರಿಯೇ ಶಿಾರಸ್ಸು ಮಾಡಿದ್ದನ್ನು ಮರೆಯಬಾರದು. ಮೈಸೂರಿನಲ್ಲಿ ಕೋಮು ಗಲಭೆ ಮಾಡಿದ ಎಸ್‌ಡಿಪಿಐ ಹಾಗೂ ಪಿಎ್ಐ ಕೇಸ್‌ಗಳನ್ನ ನಿಮ್ಮ ಸರ್ಕಾರವೇ ವಿಥ್ ಡ್ರಾ ಮಾಡಿಕೊಂಡಾಗ ಅವರು ತಪ್ಪು ಮಾಡಿದವರು ಎಂದು ಅನ್ನಿಸಲಿಲ್ಲವೇ ಸಿದ್ದರಾಮಯ್ಯನವರೇ.. ನಿಮ್ಮದು ಪೂರ್ವಗ್ರಹ ಪೀಡಿತ ಮನಸ್ಥಿತಿಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ನಡಿಗೆಯೇ ಪ್ರಾರಂಭಿಸಿಲ್ಲ. ಈ ಮೂಲಕ ದಲಿತ ಸಮೂಹಕ್ಕೆ ಮೋಸ ಮಾಡಿದೆ. ತಪ್ಪುಗಳನ್ನು ಕ್ಷಮಿಸಬಹುದು ಆದರೆ ಮೋಸವನ್ನಲ್ಲ.ಈ ಹಿಂದೆ ಬಿಜೆಪಿ ಸರ್ಕಾರ 11 ಸಾವಿರ ಕೋಟಿ ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೊಂದು ಯೋಜನೆಗೆ ವರ್ಗಾಯಿಸಿದೆ ಎಂದು ದೂರಿದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಮುಖಂಡರಾದ ಜಿಗಣೇಹಳ್ಳಿ ನೀಲಕಂಠಪ್ಪ, ಟಿ.ಆರ್.ಲಕ್ಕಪ್ಪ, ಕೆ.ಆರ್.ಚಂದ್ರು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net