

ರಾಣೆಬೆನ್ನೂರ: ಹೊಟ್ಟೆನೋವು ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಶಬರಿ ನಗರದಲ್ಲಿ ಗುರುವಾರ ನಡೆದಿದೆ.
ಭಾಗ್ಯಲಕ್ಷಿ$್ಮ ನಟರಾಜ ರಾಯಚೂರ (30) ಮೃತ ಮಹಿಳೆ.
ಇವರು ತನಗಿದ್ದ ಹೊಟ್ಟೆನೋವು ಗುಣವಾಗದ ಕಾರಣ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.