ಕದ್ದ ಚಿನ್ನಾಭರಣವನ್ನು ಚಾರ್ವಾಕ ಸೊಸೈಟಿಯಲ್ಲಿ ಅಡವಿಟ್ಟ ಕೇರಳದ ಕಳ್ಳರು

gold
Published on

ಕಡಬ: ಕೇರಳದ ತಂಡವೊಂದು ಕದ್ದ ಚಿನ್ನಾಭರಣಗಳನ್ನೂ ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಅಡಮಾನವಿರಿಸಿದ್ದೂ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕೇರಳ ಪೋಲೀಸರ ತಂಡ ಆರೋಪಿಯ ಜತೆ ಮಾ .೨ ರಂದು ಕಾಣಿಯೂರಿಗೆ ಆಗಮಿಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಹೈವೇ ದರೋಡೆಯ ಆರೋಪಿಗಳು ಕದ್ದ ಮಾಲನ್ನು ಅಡವಿರಿಸಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಕೃತ್ಯದ ಭಾಗಿಯಾದ ಆರೋಪಿಯೊಬ್ಬನ ತನಿಖೆಯ ವೇಳೆ ಪತ್ತೆಯಾದ ಹಿನ್ನಲೆಯಲ್ಲಿ ಕೇರಳ ಪೊಲೀಸರ ತಂಡ ಇಲ್ಲಿಗೆ ಭೇಟಿ ನೀಡಿದೆ.

ಈ ಖರ್ತನಾಕ್ ತಂಡ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ರಾತ್ರಿ ವೇಳೆ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದು, ಇತ್ತೀಚಿಗೆ ಕಾಂಜಾಗಾಡ್ ಪೊಲೀಸರು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net