ಕದ್ದೊಯ್ದಿದ್ದ ಎಟಿಎಂ ಯಂತ್ರ ನಾಲೆಯಲ್ಲಿ ಪತ್ತೆ

04_HSN_05
Published on

ಹಾಸನ: ಕಳೆದ ತಿಂಗಳು ಜನವರಿ 29ರಂದು ಮುಂಜಾನೆ ಹಾಸನ- ಅರಕಲಗೂಡು ಮುಖ್ಯರಸ್ತೆಯ ಹನುಮಂತಪುರದಲ್ಲಿ ಕಳ್ಳತನ ಆಗಿದ್ದ ಎಟಿಎಂ ಮಿಷನ್ ಹಾಸನ ಹೊರವಲಯದ ಶಂಕರನಹಳ್ಳಿ ಗ್ರಾಮದ ಬಳಿ ಇರುವ ನಾಲೆಯಲ್ಲಿ ಪತ್ತೆಯಾಗಿದೆ.

ಎಟಿಎಂ ಯಂತ್ರದಿಂದ ಹಣ ತೆಗೆದುಕೊಂಡು ಎಟಿಎಂ ಮಿಷನ್‌ನನ್ನು ಕಳ್ಳರು ಬಿಸಾಡಿ ಹೋಗಿದ್ದಾರೆ. ಜ.29ರಂದು ಹಣದ ಸಮೇತ ಇಂಡಿಯಾ ಒನ್ ಎಟಿಎಂ ಮಿಷನ್‌ನ್ನು ಕಳ್ಳರು ಹೊತ್ತೊಯ್ದಿದ್ದರು. ಹನುಮಂತಪುರ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇದ್ದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಖದೀಮರು ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದರು. ಯಂತ್ರವನ್ನು ಒಡೆದು ಅದರಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಯಂತ್ರವನ್ನು ನಾಲೆಯಲ್ಲಿ ಬಿಸಾಡಿ ಹೋಗಿದ್ದಾರೆ.

ಸುದ್ದಿ ತಿಳಿದ ಕೂಡಲೇ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net