ಸ್ಟಾಕ್ ಟ್ರೇಡಿಂಗ್ ನೆಪದಲ್ಲಿ 25 ಲಕ್ಷ ರೂ. ವಂಚನೆ

Fruad
Published on


ಮಂಗಳೂರು: ಸ್ಟಾಕ್ ಟ್ರೇಡಿಂಗ್ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ 25ಲಕ್ಷ ರೂ. ವಂಚಿಸಿದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಪಿರ್ಯಾದಿದಾರರಿಗೆ ಸೆ.24ರಂದು ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಹಣ ಸಂಪಾದಿಸುವ ಬಗ್ಗೆ ಸಂದೇಶ ಬಂದಿರುತ್ತದೆ. ನಂತರ ಸದ್ರಿ ಟ್ರೇಡಿಂಗ್ ಆ್ಯಪ್‌ಗೆ ಫಿರ್ಯಾದಾರರನ್ನು ಸೇರಿಸಲಾಗಿರುತ್ತದೆ. ಮೊದಲಿಗೆ ಸಣ್ಣ ಟಾಸ್ಕ್ ನೀಡಿ ಸ್ವಲ್ಪ ಪ್ರಮಾಣದ ಹಣ ನೀಡಿರುತ್ತಾರೆ. ನಂತರ ದೊಡ್ಡ ಮಟ್ಟದ ಹಣ ಗಳಿಸಲು ದೊಡ್ಡ ಟಾಸ್ಕ್ ನೀಡಿದ್ದು, ಈ ಮೂಲಕ ಹಂತಹಂತವಾಗಿ 25ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ.
ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net