

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ನೀಡುತ್ತಿದ್ದ ತರಬೇತಿಯಿಂದ ಪ್ರೇರಿತರಾದ ನಗರದ ನಿವಾಸಿಯೊಬ್ಬರು 86 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಿಜಯನಗರ ನಿವಾಸಿ ಸತೀಶ್ (61) ಹಣ ಕಳೆದುಕೊಂಡವರು. ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತನ್ನು ನೋಡಿ ಸತೀಶ್ ಅವರು ಹೇಳಿದ ಹಾಗೆ ಹೂಡಿಕೆ ಮಾಡಿದರು. ಸಂಸ್ಥೆ ನೀಡಿದ ಸಲಹೆಯಂತೆ ಏಪ್ರಿಲ್ ತಿಂಗಳಿಂದ ವಿವಿಧ ಹಂತಗಳಲ್ಲಿ 86 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಲಾಭಾಂಶ ಪಡೆಯಲು ಮುಂದಾದಾಗ ತಾವು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.