ಮನೆಗೆ ಭೇಟಿ ನೀಡಿದ ಖಚಿತತೆಗೆ ಸ್ಟಿಕ್ಕರ್: ಎಸ್​​​ಸಿ ಸರ್ವೆ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

bbmp office
Published on

ಬೆಂಗಳೂರು: ನಗರದಲ್ಲಿ ನಡೆದಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಸಮೀಕ್ಷೆ ವೇಳೆ ಗಣತಿದಾರರು ಮನೆಗಳಿಗೆ ಭೇಟಿ ನೀಡಿದ ಖಚಿತತೆಗಾಗಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಸಮೀಕ್ಷೆಯು ಪ್ರತಿ ಅರ್ಹ ಕುಟುಂಬವನ್ನು ಒಳಗೊಂಡಿದೆಯೇ ಎಂಬುದರ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಇದರಿಂದ ಯಾವುದೇ ಎಸ್‌ಸಿ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಖಚಿತಪಡಿಸುತ್ತದೆ. ಮನೆಯ ಸದಸ್ಯರೊಂದಿಗೆ ಸಂವಹನ ನಡೆಸದೆ ಸ್ಟಿಕ್ಕರ್ ಅಂಟಿಸಬಾರದು ಎಂದು ಗಣತಿದಾರರಿಗೆ ಸೂಚಿಸಲಾಗಿದೆ. ಆದರೂ, ಕೆಲ ಪ್ರಕರಣಗಳಲ್ಲಿ ಇಂತಹ ಘಟನೆ ಆಗಿರಬಹುದು. ಲಕ್ಷಾಂತರ ಸಂಖ್ಯೆಯ ಮನೆಗಳಿಗೆ ಭೇಟಿ ನೀಡುವಾಗ ಕೆಲವು ತಪ್ಪಿಹೋಗಿರಬಹುದು. ಸಂವಹನವಿಲ್ಲದೆ ಸ್ಟಿಕ್ಕರ್ ಅಂಟಿಸಿದ್ದರೆ ಸಹಾಯವಾಣಿ 9481359000 ಗೆ ಕರೆ ಮಾಡಿ ಸಮೀಕ್ಷೆ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಯಂ ಘೋಷಣೆಯ ಆಯ್ಕೆ:

ಸಮೀಕ್ಷೆಗೆ ಒಳಪಡದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣಾ ನಮೂನೆ ಭರ್ತಿ ಮಾಡುವ ಮೂಲಕ ಗಣತಿಯಲ್ಲಿ ಭಾಗವಹಿಸಬಹುದು. ಸ್ಟಿಕ್ಕರ್ ಕೇವಲ ಸಮೀಕ್ಷಾ ತಂಡವು ಆ ಮನೆಗೆ ತಲುಪಿರುವುದನ್ನು ಮಾತ್ರ ಸೂಚಿಸುತ್ತದೆ. ನೇರ ಸಂವಹನ ನಡೆಯದ ಹೊರತು ಸಮೀಕ್ಷೆ ಪೂರ್ಣಗೊಂಡಿದೆ ಎಂದರ್ಥವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net