ಏ.೨೨ ರಂದು ಸ್ಟಿಕ್ ವರ್ಕ್ ಮ್ಯಾಜಿಕ್ ಕೃತಿ ಲೋಕಾರ್ಪಣೆ

book
Published on

ಮಡಿಕೇರಿ: ಕೊಡವ ಹಾಕಿ ಪಂದ್ಯಾವಳಿಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸಂದರ್ಭ ಕೊಡವ ಹಾಕಿ ಪಂದ್ಯಾವಳಿಯ ೨೫ ವಷ೯ಗಳ ಇತಿಹಾಸವನ್ನು ದಾಖಲಿಸುವ ಸ್ಟಿಕ್ ವರ್ಕ್ ಮ್ಯಾಜಿಕ್-ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಹೆಸರಿನ ಇಂಗ್ಲೀಷ್ ಕೃತಿಯು ಏ.೨೨ ರಂದು ಮಂಗಳವಾರ ಲೋಕಾರ್ಪಣೆಯಾಗಲಿದೆ ಎಂದು ವಾರ್ತಾ ಕಮ್ಯೂನಿಕೇಷನ್ಸ್ ವ್ಯವಸ್ಥಾಪಕ ನಿರ್ದೇಶಕ, ಪತ್ರಕರ್ತ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ, ಲೇಖಕ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ರಚಿಸಿರುವ ಪುಸ್ತಕವನ್ನು ಮಡಿಕೇರಿಯ ವಾರ್ತಾ ಕಮ್ಯೂನಿಕೇಷನ್ಸ್ ಪ್ರಕಾಶನದಲ್ಲಿ ಹೊರತರಲಾಗುತ್ತಿದೆ. ೨೫ ವರ್ಷಗಳ ಕೊಡವ ಹಾಕಿ ಪಂದ್ಯಾವಳಿಯ ಇತಿಹಾಸದ ದಾಖಲೆಯ ಲೇಖನಗಳು, ಛಾಯಾಚಿತ್ರಗಳನ್ನು ಹೊಂದಿರುವ ಪುಸ್ತಕದಲ್ಲಿ ಕೊಡಗಿನ ಹಾಕಿ ಇತಿಹಾಸದ ಮೆಲುಕು ಕೂಡ ಇದೆ ಎಂದು ತಿಳಿಸಿದ್ದಾರೆ.

ಏ.೨೨ ರಂದು ಮಂಗಳವಾರ ಸಂಜೆ ೬ ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಸ್ಟಿಕ್ ವರ್ಕ್ ಮ್ಯಾಜಿಕ್-ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಕೃತಿಯನ್ನು ಮಾಜಿ ಕಾನೂನು ಸಚಿವ ಮೇರಿಯಂಡ ಸಿ.ನಾಣಯ್ಯ ಲೋಕಾರ್ಪಣೆ ಮಾಡಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಪಂದ್ಯಾವಳಿಯ ಸಂಚಾಲಕ ಮದ್ದಂಡ ರಶಿನ್ ಸುಬ್ಬಯ್ಯ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಚ್.ಟಿ.ಅನಿಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net